ಶಿವಮೊಗ್ಗ : ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದಿನದಿಂದ ದಿನಕ್ಕೆ ಹಲವು ಸ್ಪೋಟಕ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಇದೀಗ ಶಂಕಿತ ಉಗ್ರರು ಬೆಂಕಿ ಪೊಟ್ಟಣ್ಣ ಬಳಸಿ ಬಾಂಬ್ ಬ್ಲಾಸ್ಟ್ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತ ಉಗ್ರ ಯಾಸೀನ್ ಶಿವಮೊಗ್ಗದ ರಾಮ್ದೇವ್ ಪ್ರಾವಿಜನ್ ಸ್ಟೋರ್ ಗೆ ತೆರಳಿ ಬೆಂಕಿ ಪೊಟ್ಟಣ ಖರೀದಿ ಮಾಡಿದ್ದನು. ಇಂದು ವಿಚಾರಣೆಯಲ್ಲಿ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಇಂದು ಅಂಗಡಿಗೆ ಶಂಕಿತ ಉಗ್ರರನನ್ನು ಕರೆ ತಂದು ಪೊಲೀಸರು ಮಹಜರು ಮಾಡಿದ್ದಾರೆ,
ಅದೇ ರೀತಿ ಶಂಕಿತ ಉಗ್ರರಾದ ಯಾಜ್, ಯಾಸಿನ್ ಮೊಬೈಲ್ ನಲ್ಲಿ 12 ಮೆಸೆಂಜರ್ ಆ್ಯಪ್ ಗಳು ಪತ್ತೆಯಾಗಿದ್ದು, ಇದರ ಮೂಲಕವೇ ಹೆಚ್ಚು ಸಂಪರ್ಕ ಸಾಧಿಸುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ಲಭ್ಯವಾಗಿದೆ.
ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಜಬೀವುಲ್ಲಾಗೆ ಐಸಿಸ್ ಮಾತ್ರವಲ್ಲ ಲಷ್ಕರ್ ಇ ತೋಯ್ಬಾ ಉಗ್ರರ ನಂಟು ಕೂಡ ಇದೆ . ಶಿವಮೊಗ್ಗದಲ್ಲಿ ಪ್ರೇಮ್ಸಿಂಗ್ಗೆ ಚಾಕು ಚುಚ್ಚಿದ್ದ ಜಬೀವುಲ್ಲಾ ̤ ಬೆಳಗಾವಿಯಲ್ಲಿ ಜೈಲಿಗೆ ಹೋದಾಗ ಉಗ್ರರ ಸಂಪರ್ಕ ಹೊಂದಿದ್ದಾನೆ, ಜಬೀವುಲ್ಲಾ ಮೊಬೈಲ್ನಲ್ಲಿ ಮಾತುಕತೆ ಆಡಿಯೋ ಲಭ್ಯವಾಗಿದೆ ಎಂದು ಇತ್ತೀಚೆಗಷ್ಟೇ ಮಾಧ್ಯಮಗಳಿಗೆ ಅಲೋಕ್ ಕುಮಾರ್ ಮಾಹಿತಿ ನೀಡಿದ್ದರು.
BIGG NEWS: k.G ಹಳ್ಳಿ ಪ್ರಕರಣ; PFI ಸಂಘಟನೆಯ 14ಮಂದಿ ಕಾರ್ಯಕರ್ತರು ಅರೆಸ್ಟ್
ವಿದ್ಯಾರ್ಥಿನಿಯರಿಂದಲೇ ಶಾಲೆಯ ಶೌಚಾಲಯ ಸ್ವಚ್ಛ… ಭಾರೀ ಚರ್ಚೆಗೆ ಗ್ರಾಸವಾದ ವೈರಲ್ ಫೋಟೋ