ನವದೆಹಲಿ : ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಮತ್ತು ಅವರ ದೀರ್ಘಕಾಲದ ಗೆಳೆಯ ನೂಪುರ್ ಶಿಖಾರೆ ಅವರೊಂದಿಗೆ ಮದುವೆಗೆ ಸಿದ್ದರಾಗಿದ್ದಾರೆ. ಹೌದು, 2020 ರಲ್ಲಿ ಪ್ರೀತಿಯಲ್ಲಿ ಬಿದ್ದ ಈ ಜೋಡಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು! ಗುರುವಾರ ರಾತ್ರಿ, ಇರಾ ನೂಪುರ್ ತನಗೆ ಅತ್ಯಂತ ರೊಮ್ಯಾಂಟಿಕ್ ರೀತಿಯಲ್ಲಿ ಪ್ರಪೋಸ್ ಮಾಡುವ ಕನಸಿನ ಪ್ರಪೋಸಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇರಾ ಮತ್ತು ನೂಪುರ್, ರೋಮಾಂಚಕಾರಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪುರ್ ತನ್ನ ಕೈಯಲ್ಲಿ ಉಂಗುರವನ್ನು ಹಿಡಿದುಕೊಂಡು ಒಂದು ಮೊಣಕಾಲಿನ ಮೇಲೆ ಇಳಿದು ಇರಾಳನ್ನು ಅವನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾರೆ. ಈ ಬಗ್ಗೆ ಅಲ್ಲಿ ನೆರದಿದ್ದ ಜನಸಮೂಹವು ಹರ್ಷೋದ್ಗಾರ ಮಾಡುತ್ತಿದ್ದಂತೆ, ಇರಾ ಒಂದು ದೊಡ್ಡ ‘ಹೌದು’ ಎಂದು ಹೇಳಿದ್ದಾರೆ.