ಕಲಬುರಗಿ: ಜಿಲ್ಲೆಯಲ್ಲಿ ಮರಳು ಸಾಗಣೆಗೆ ಲಂಚ ಪಡೆಯುತ್ತಿದ್ದ ಮೂವರು ಪೊಲೀಸರು ಲೋಕಾಯುಕ್ತ ಅಧಿಕಾರಿಗಳ ಬಲೆ ಬಿದ್ದಿದ್ದಾರೆ.
BIGG NEWS: ಬಿಜೆಪಿ-ಜೆಡಿಎಸ್ ಮಧ್ಯೆ BMS ಜಪಾಪಟಿ; ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ
ಜೇವರ್ಗಿ ಠಾಣೆ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಇನ್ಸ್ಪೆಕ್ಟರ್ ಶಿವಪ್ರಸಾದ ಮಠದ, ಜೇವರ್ಗಿ ಎಸ್ಪಿ ಬೀಟ್ ಕಾನ್ಸ್ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಪಿಐ ವಾಹನ ಚಾಲಕ ಅವಣ್ಣ ಲೋಕಾಯುಕ್ತರ ಬಲೆಗೆ ಬಿದ್ದವರು. ಶಹಾಪುರದ ಮರಳು ವ್ಯಾಪಾರಿ ಅಖಿಲ್ ಎಂಬುವರ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ.
BIGG NEWS: ಬಿಜೆಪಿ-ಜೆಡಿಎಸ್ ಮಧ್ಯೆ BMS ಜಪಾಪಟಿ; ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ
ಮರಳು ವ್ಯಾಪಾರಿ ಅಖಿಲ್ ಅವರ ಬಳಿ 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಶಿವರಾಯ ಅರಳಗುಂಡಗಿ, ಜೇವರ್ಗಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ವೇಳೆ ಶಿವರಾಯ ಹಣದ ಸಮೇತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗುತ್ತಿದೆ.