ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಚೀನಾದ ರಾಜಕೀಯ ನಿಲುವಿಗಾಗಿ ಟೀಕಿಸಿದ್ದು, ಚೀನಾದಂತಹ ‘ಕೃತಕ’ ದೇಶದಲ್ಲಿ ತಮ್ಮ ಕೊನೆಯುಸಿರೆಳೆಯುವ ಬದಲು, ಮುಕ್ತ ಪ್ರಜಾಪ್ರಭುತ್ವವಾದ ಭಾರತದಲ್ಲಿ ಸಾಯಲು ಬಯಸುವೆ ಅಂತ ಹೇಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ (ಯುಎಸ್ಐಪಿ) ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ದಲೈಲಾಮಾ ಅವರು ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದ ವೇಳೇಯಲ್ಲಿ ಈ ಬಗ್ಗೆ ಹೇಳಿದ್ದಾರೆ, ಧರ್ಮಶಾಲಾದಲ್ಲಿ 13 ದೇಶಗಳ 28 ಯುವ ಬೌದ್ದ ಬಿಕ್ಕುಗಳ ವೈಯಕ್ತಿಕ ಸಂವಾದ ನಡೆಸಿದರು.
“ನನ್ನ ಸಮುದಾಯಕ್ಕೆ ಮತ್ತು ನನ್ನ ಜೀವಕ್ಕೆ ಅಪಾಯವಿದೆ. ಪರಿಸ್ಥಿತಿ ತುರ್ತು ಮತ್ತು ಹತಾಶವಾಗಿತ್ತು. ಈ ಸಮಯದಲ್ಲಿ ನಾನು ತಪ್ಪಿಸಿಕೊಳ್ಳಲು ನಿರ್ಧರಿಸಿದೆ , ಭಾರತದಲ್ಲಿ ನಿರಾಶ್ರಿತನಾಗಿ ನಾನು ಹೆಚ್ಚು ಸಂತೋಷವಾಗಿದ್ದೇನೆ. ನಾವು ಭಾರತದೊಂದಿಗೆ ಸುದೀರ್ಘ ಇತಿಹಾಸವನ್ನು ಹೊಂದಿದ್ದೇವೆ ಮತ್ತು ನಾನು ಭಾರತ ಸರ್ಕಾರದ ವಿನಮ್ರ ಅತಿಥಿಯಾಗಿದ್ದೇನೆ” ಎಂದು ದಲೈ ಲಾಮಾ ಅವರು ಟಿಬೆಟ್ನಿಂದ ಹೇಗೆ ಮತ್ತು ಏಕೆ ತಪ್ಪಿಸಿಕೊಂಡರು ಎಂಬುದನ್ನು ವಿವರಿಸುವಾಗ ಹೇಳಿದರು.