ತುಮಕೂರು: ನಗರದಲ್ಲಿ ವಿವಿದೆಡೆ ಜಾಗೃತಿ ಮೂಡಿಸುವ ಸಲುವಾಗಿ ಗೋಡೆಗಳ ಮೇಲೆ ಬರಹಗಳನ್ನು ಬರೆಯಲಾಗಿದೆ. ಇದರಲ್ಲಿ ಬಹುತೇಕ ಕನ್ನಡ ತಪ್ಪು ಪದಗಳಿಂದ ಕೂಡಿದೆ. ಹೀಗಾಗಿ ಜನರು ಆಕ್ರೋಶ ಹೊರಗೆ ಹಾಕಿದ್ದಾರೆ.
BIGG NEWS: ಡಿ.ಕೆಂಪಣ್ಣ ವಿರುದ್ಧ ₹50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಮುನಿರತ್ನ
ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪರಿಸರ, ಟ್ರಾಫಿಕ್ ರೂಲ್ಸ್, ಸಂಚಾರ ನಿಯಮಗಳು ಹಾಗೂ ಸ್ಮಾರ್ಟ್ ಸಿಟಿ ಕುರಿತ ಸಂದೇಶ ಸಾರುವ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಆದರೇ ಬರಹಗಳಲ್ಲಿ ಕನ್ನಡ ಪದಗಳು ತಪ್ಪಾಗಿರುವುದರಿಂದ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಕನ್ನಡ ಪದಗಳ ದೊಡ್ಡ ಅಕ್ಷರದಲ್ಲಿ ತಪ್ಪಾಗಿ ಬರೆಯುತ್ತಿದ್ದರೂ ಕೂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಥವಾ ಮಹಾನಗರ ಪಾಲಿಕೆ ಸಿಬ್ಬಂದಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.