ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಧಿಕ ಮಳೆಯಿಂದಾಗಿ ದೆಹಲಿ-ಗುರುಗ್ರಾಮ್ ಎಕ್ಸ್ಪ್ರೆಸ್ ಹೆದ್ದಾರಿಯೂ ಅಂಪೂರ್ಣ ಜಲಾವೃತಗೊಂಡಿದ್ದು, ವಾಹನಗಳು, ಪಾದಚಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಮಳೆ ನೀರು ರಸ್ತೆಯಲ್ಲೆ ನಿಂತಿದ್ದು, ವಾಹನ ದಟ್ಟನೆ ಉಂಟಾಗಿದೆ,
ಪಾದಚಾರಿಗಳು, ಮುಳುಗಿದ ರಸ್ತೆಗಳಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ, ನೀರಿನಿಂದ ತುಂಬಿದ ಪ್ರದೇಶಗಳ ಮೂಲಕ ಪ್ರಯಾಣಿಸುತ್ತಿರುವ ದೃಶ್ಯಗಳನ್ನು ನೋಡಬಹುದು.. ಹರಿಯಾಣದಲ್ಲಿನ ರಸ್ತೆಯಲ್ಲಿ ನೀರು ಮೊಣಕಾಲಿನುದ್ದಕ್ಕೂ ನಿಂತಿದೆ.
ಹರಿಯಾಣ ಮತ್ತು ಚಂಡೀಗಢದಲ್ಲಿ ಸೆಪ್ಟೆಂಬರ್ 22, 23, 25 ಮತ್ತು 26 ರಂದು ಮತ್ತು ಪೂರ್ವ ರಾಜಸ್ಥಾನದ ಮೇಲೆ ಸೆಪ್ಟೆಂಬರ್ 22-24 ರಂದು, ಸೆಪ್ಟೆಂಬರ್ 22 ರಂದು ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಪ್ರತ್ಯೇಕವಾದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
#WATCH | Haryana: Delhi-Gurugram expressway inundated due to waterlogging after heavy rainfall in Gurugram pic.twitter.com/anHlIPWyw0
— ANI (@ANI) September 22, 2022
ಇದೇ ವೇಳೆ ಸೆ.22 ರಿಂದ 25 ರವರೆಗೆ ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಲಘು/ಮಧ್ಯಮ ಮಳೆ ಬೀಳುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
‘ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡುವೆ’ : ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡ