ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಿಳೆಯರು ಹಾಗೂ ಪುರುಷರಲ್ಲಿ ಕಣ್ಣುಗಳ ರೆಪ್ಪೆ ಮಿಟುಕುವುದು ಅಥವಾ ಬಡಿದುಕೊಳ್ಳುವುದು ಕೆಲವು ಶುಭ, ಅಶುಭದ ಚಿಹ್ನೆಗಳಾಗಿವೆ. ಮಹಿಳೆ ಹಾಗೂ ಪುರುಷರಲ್ಲಿ ಯಾವ ಕಣಱಣಿನ ರೆಪ್ಪೆ ಬಡಿದರೆ ಒಳ್ಳೆಯದು, ಯಾವುದು ಕೆಟ್ಟ ಸೂಚನೆ ಎಂಬುದನ್ನು ತಿಳಿಯುವುದು ಬಹುಮುಖ್ಯವಾಗಿದೆ.
ಶಾಸ್ತ್ರದ ಪ್ರಕಾರ, ಕಣ್ಣುಗಳು ಬಡಿದುಕೊಳ್ಳುವುದು ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳನ್ನು ಸೂಚಿಸುತ್ತದೆ.
ಮಹಿಳೆಯರ ಎಡಗಣ್ಣಿನ ರೆಪ್ಪೆ ಪದೇ ಪದೇ ಬಡೆದುಕೊಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಎಡಗಣ್ಣು ಸೆಳೆತವಾದರೆ ಆರ್ಥಿಕ ಲಾಭ ಸಿಗುತ್ತದೆ.
ಮತ್ತೊಂದೆಡೆ, ಎಡಗಣ್ಣು ಸೆಳೆತವಾದರೆ, ಅದನ್ನು ಅಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ವಿವಾದದ ಪರಿಸ್ಥಿತಿ ಉದ್ಭವಿಸಬಹುದು.
ಪುರುಷರ ಎಡಗಣ್ಣಿನ ಸೆಳೆತವು ಕುಟುಂಬ ಅಥವಾ ಸ್ನೇಹಿತರ ನಡುವೆ ವಾದವನ್ನು ಉಂಟು ಮಾಬಹುದು. ಮುಂದೆ ಯಾವುದೋ ಸಮಸ್ಯೆ ಕಾಡಲಿದೆ ಎಂಬುದನ್ನು ಸೂಚಿಸುತ್ತದೆ.
ಮಹಿಳೆಯರ ಬಲಗಣ್ಣಿನ ರೆಪ್ಪೆ ಬಡಿದುಕೊಂಡರೆ ಒಳ್ಳೆಯ ಲಕ್ಷಣವಲ್ಲ. ಇದು ಅವರ ಕೆಲಸಗಳಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಕುಟುಂಬದೊಂದಿಗೆ ಸಂಬಂಧಗಳು ಹದಗೆಡಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ.
ಪುರುಷರ ಬಲಗಣ್ಣಿನ ರೆಪ್ಪೆ ಬಡೆದುಕೊಂಡರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಹಣದ ಆಗಮನವನ್ನು ಸೂಚಿಸುತ್ತದೆ. ವ್ಯಕ್ತಿಯ ಎಲ್ಲಾ ಕೆಲಸಗಳಲ್ಲಿ ಒಳ್ಳೆಯ ಲಾಭ ಸಿಗಲಿದ್ದು, ಪ್ರತಿಯೊಂದು ಆಸೆಯೂ ಈಡೇರುತ್ತದೆ ಎನ್ನಲಾಗುತ್ತದೆ.
ಆದರೆ ವಿಜ್ಞಾನದ ದೃಷ್ಟಿಕೋನದಿಂದ ಹೇಳುವುದಾದರೆ ಕಣ್ಣುಗಳ ಸೆಳೆತ ಅಥವಾ ಕಣ್ಣಿನ ರೆಪ್ಪೆಯು ಬಡಿದುಕೊಳ್ಳುವುದು ಸ್ನಾಯುವಿನ ಅಸ್ವಸ್ಥತೆಗೆ ಕಾರಣವಾಗಿದೆ. ಒತ್ತಡ, ನಿದ್ರೆಯ ಕೊರತೆ, ಆಯಾಸ ಇತ್ಯಾದಿಗಳು ಕಣ್ಣು ಸೆಳೆತಕ್ಕೆ ಕಾರಣ ಎನ್ನಲಾಗುತ್ತದೆ.
VIRAL VIDEO : ತವರಿಂದ ‘ಹೆಂಡ್ತಿ’ ಬರಲಿಲ್ಲವೆಂದು ಕೋಪ : 75 ಅಡಿ ಹೈ ಟೆನ್ಶನ್ ಟವರ್ ಏರಿದ ‘ಭೂಪ’..!