ಮಹಾರಾಷ್ಟ್ರ : ಐದು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಕನಿಷ್ಠ ನಾಲ್ವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರದಲ್ಲಿ ನಡೆದಿದೆ.
ಇನ್ನೂ ಕೆಲವು ವ್ಯಕ್ತಿಗಳು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎಂದು ಉಲ್ಲಾಸನಗರ ತಹಸೀಲ್ದಾರ್ (ಕಂದಾಯ ಅಧಿಕಾರಿ) ಕೋಮಲ್ ಠಾಕೂರ್ ತಿಳಿಸಿದ್ದಾರೆ.
Maharashtra | Three dead, one injured after a part of a slab on the fourth floor of a building collapsed in Ulhasnagar in Thane district. Two still trapped, rescue operation underway: Thane municipal corporation
— ANI (@ANI) September 22, 2022
ಉಲ್ಲಾಸನಗರ ಕ್ಯಾಂಪ್ 5 ರಲ್ಲಿರುವ ಕಟ್ಟಡದ ಮೂರನೇ ಅಂತಸ್ತಿನ ಸ್ಲ್ಯಾಬ್ ಬೆಳಿಗ್ಗೆ 11.30 ರ ಸುಮಾರಿಗೆ ಕುಸಿದಿದ್ದು, ಈ ಕಟ್ಟಡ 30 ಫ್ಲಾಟ್ಗಳನ್ನು ಹೊಂದಿದೆ. ಇದರ ರಚನೆಯು ಅಕ್ರಮವಾಗಿದ್ದು, ಈಗಾಗಲೇ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ.
ಐದು ಕುಟುಂಬಗಳು ಇನ್ನೂ ಕಟ್ಟಡದಲ್ಲಿ ಉಳಿದುಕೊಂಡಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.