ವಿಜಯಪುರ: ಕಾಡುತ್ತಿರುವ ಮಾರಣಾಂತಿಕ ಚರ್ಮಗಂಟು ರೋಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಹಾವೇರಿ, ಶಿಗ್ಗಾಂವಿ ಮತ್ತು ಬ್ಯಾಡಗಿ ತಾಲ್ಲೂಕಿಗಳಲ್ಲಿ ರೋಗವು ವ್ಯಾಪಿಸಿದೆ. ಹೀಗಾಗಿ ವಿಜಯಪುರ ಜಿಲ್ಲೆಯಲ್ಲೂ ಹರಡುವ ಭೀತಿ ಶುರುವಾಗಿದೆ.
HEALTH TIPS: ಮೊಟ್ಟೆಯ ಚಿಪ್ಪನ್ನು ಎಸೆಯುವ ಮುನ್ನ ಅದರ ಪ್ರಯೋಜನ ತಿಳಿದುಕೊಳ್ಳಿ| Benefits of egg
ಈಗಾಗಲೇ ಜಿಲ್ಲೆಯಲ್ಲಿ ಕೆಲವು ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಂಡುಬಂದಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಮುನ್ನಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ವಿತರಿಸಲು ಕ್ರವವಹಿಸಿದ್ದು, ಮಹಾರಾಷ್ಟ್ರ ಗಡಿ ಭಾಗದ ಆರು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.
HEALTH TIPS: ಮೊಟ್ಟೆಯ ಚಿಪ್ಪನ್ನು ಎಸೆಯುವ ಮುನ್ನ ಅದರ ಪ್ರಯೋಜನ ತಿಳಿದುಕೊಳ್ಳಿ| Benefits of egg
ಇನ್ನು ಜಾನುವಾರುಗಳಿಗೆ ಚರ್ಮಗಂಟು ರೋಗ ಹಿನ್ನೆಲೆಯಲ್ಲಿ ತಿಂಗಳ ಕಾಲ ಜಾನುವಾರು ಸಂತೆ, ಜಾತ್ರೆಗಳ ರದ್ದುಪಡಿಸಲಾಗಿದೆ ಎಂದು ವಿಜಯಪುರ ಡಿಸಿ ಆದೇಶ ಹೊರಡಿಸಿದ್ದಾರೆ.