ಮೈಸೂರು: ಅರಮನೆ ನಗರಿ ಮೈಸೂರಿನಲ್ಲೂ ಸಹ ಎನ್ ಐಎ ದಾಳಿ ನಡೆಸಿದೆ . ಇಲ್ಲಿನ ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲಾ ನಿವಾಸದ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
BIGG NEWS: ವಿಧಾನಪರಿಷತ್ ನಲ್ಲಿ ರಾರಾಜಿಸಿದ 40% ಕಮಿಷನ್; ಮಾಸ್ಕ್ ಮೇಲೆ ಬರೆಸಿಕೊಂಡು ಬಂದ ಕಾಂಗ್ರೆಸ್ ಸದಸ್ಯರು
ಮೈಸೂರಿನ ಶಾಂತಿನಗರದಲ್ಲಿರುವ ಕಲಿಮುಲ್ಲಾ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಿಮುಲ್ಲಾ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಮುಂಜಾನೆ 3.30ರ ವೇಳೆಗೆ 8 ಜನ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.ಬೆಳಿಗ್ಗೆ 6 ಗಂಟೆವರೆಗೆ ಕಲಿಮುಲ್ಲಾ ಮನೆಯಲ್ಲಿ ಶೋಧ ನಡೆಸಲಾಗಿದೆ. ದಾಳಿ ವೇಳೆ ಕೆಲ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಎರಡು ಗಂಟೆಗಳ ಕಾಲ ಸಿಸಿಬಿ ಕಚೇರಿಯಲ್ಲಿ ಮಹಮ್ಮದ್ ಕಲಿಮುಲ್ಲಾ ವಿಚಾರಣೆ ನಡೆಸಿ, ಬೆಂಗಳೂರಿಗೆ ಕರೆದೊಯ್ಯಲಾಗಿದೆ.