ಬೆಂಗಳೂರು: ವಿಧಾನಪರಿಷತ್ ಕಲಾಪ ಆರಂಭಗೊಂಡಿದೆ. ಪರಿಷತ್ ನಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರ ಕುರಿತು ಚರ್ಚೆ. ಹೀಗಾಗಿ ವಿಪಕ್ಷ ನಾಯಕರು ಮಾಸ್ಕ್ ಮೇಲೆ 40 ಪರ್ಸೆಂಟ್ ಕಮಿಷನ್ ಬರೆಸಿಕೊಂಡು ಹಾಕಿಕೊಂಡಿದ್ದಾರೆ.
BIGG NEWS : ಡಿ.ಜೆ ಹಳ್ಳಿ & ಕೆ.ಜಿ ಹಳ್ಳಿ ಗಲಭೆ ಕೇಸ್ : ಮೂವರು `PFI’ ಮುಖಂಡರು ಪೊಲೀಸರ ವಶಕ್ಕೆ
ಇದೀಗ ಪರಿಷತ್ ನಲ್ಲಿ 40 ಪರ್ಸೆಂಟ್ ಕಮಿಷನ್ ಎಲ್ಲ ಕಡೆ ರಾರಾಜಿಸುತ್ತಿದೆ. ಸಿಎಂಗೆ ಮುಜುಗರ ಮಾಡಲು ಮಾಸ್ಕ್ ಹಾಕಿಕೊಂಡು ವಿಪಕ್ಷ ನಾಯಕರು ಸದನಕ್ಕೆ ಬಂದಿದ್ದಾರೆ.ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪರಿಷತ್ನಲ್ಲಿ 40 ಪರ್ಸೆಂಟ್ ಕಮಿಷನ್ ಎಂದು ಮಾಸ್ಕ್ ಮೇಲೆ ಬರೆಸಿಕೊಂಡು ಕಾಂಗ್ರೆಸ್ ಸದಸ್ಯರು ಸದನಕ್ಕೆ ಆಗಮಿಸಿದರು. ಸಿಎಂಗೆ ಮುಜುಗರ ಮಾಡಲು ಮಾಸ್ಕ್ ಹಾಕಿದ ಪರ್ಸಂಟೇಜ್ ಸರ್ಕಾರ ಎನ್ನುವ ಬರಹ ಹಾಕಿಕೊಂಡು ಬಂದಿದ್ದರು. ಇದು ಆಡಳಿತ ಪಕ್ಷ ಸದಸ್ಯರನ್ನು ಕೆರಳಿಸಿದ್ದು, ಪ್ರತಿಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಹರಿಹಾಯ್ದರು..ಸರ್ಕಾರ ಏಕ ಪಕ್ಷೀಯವಾಗಿ ಕ್ರಮ ತೆಗದುಕೊಂಡಿದೆ. ರಾತ್ರೋರಾತ್ರಿ ಬಂಧನ ಮಾಡಿದ್ದಾರೆ.ವಿಪಕ್ಷ ಸದಸ್ಯರು ಸದನಕ್ಕೆ ಇಳಿದಿದ್ದು, ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಗದ್ದಲ ಶುರುವಾಗಿದ್ದು, ಹೇಡಿಗಳು ಮಾಡೋ ಕೆಲಸ ಮಾಡಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.