ಬೆಂಗಳೂರು : ಬೆಂಗಳೂರು ನಗರದ ವಿವಿಧೆಡೆ ಕಾಂಗ್ರೆಸ್ ಪೇಸಿಎಂ(PayCM) ಹೆಸರಿನ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
BIG NEWS: ʻಮಾನಸಿಕ ಆರೋಗ್ಯಕ್ಕೆ ಆದ್ಯತೆʼ: ತನ್ನ ಉದ್ಯೋಗಿಗಳಿಗೆ 11 ದಿನ ವಿರಾಮ ನೀಡಿದ ʻMeeshoʼ!
ಈ ಕುರಿತು ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಕ್ರಮ ಕೈಗೊಳ್ಳಬೇಕಿರುವುದು PayCM ಪೋಸ್ಟರ್ ಅಂಟಿಸಿದವರ ಮೇಲಲ್ಲ, 40% ತಿಂದವರ ಮೇಲೆ. ಮರ್ಯಾದೆಯನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದು ಸರ್ಕಾರಕ್ಕೆ ಇನ್ನೂ ತಿಳಿದಿಲ್ಲ. ಗುಬ್ಬಿ ಮೇಲೆ ಬ್ರಹ್ಮಸ್ತ್ರ ಎಂಬಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನಡೆಸುವ ಬದಲು ಈ ಅಭಿಯಾನ ಕೈಗೊಂಡರುವ ನಮ್ಮೆದುರು ಚರ್ಚೆಗೆ ಬರಲು ಸರ್ಕಾರಕ್ಕೆ ಭಯವೇಕೆ? ಎಂದು ಟೀಕಿಸಿದ್ದಾರೆ.
ಕ್ರಮ ಕೈಗೊಳ್ಳಬೇಕಿರುವುದು #PayCM ಪೋಸ್ಟರ್ ಅಂಟಿಸಿದವರ ಮೇಲಲ್ಲ, 40% ತಿಂದವರ ಮೇಲೆ.
ಮರ್ಯಾದೆಯನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದು ಸರ್ಕಾರಕ್ಕೆ ಇನ್ನೂ ತಿಳಿದಿಲ್ಲ!
ಗುಬ್ಬಿ ಮೇಲೆ ಬ್ರಹ್ಮಸ್ತ್ರ ಎಂಬಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನಡೆಸುವ ಬದಲು ಈ ಅಭಿಯಾನ ಕೈಗೊಂಡರುವ ನಮ್ಮೆದುರು ಚರ್ಚೆಗೆ ಬರಲು ಸರ್ಕಾರಕ್ಕೆ ಭಯವೇಕೆ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 22, 2022
ರಾಜ್ಯ ಸರ್ಕಾರ ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಸಿಸಿಬಿ ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಗಗನ್ ಯಾದವ್ ಮತ್ತು ಬಿ.ಆರ್.ನಾಯ್ಡು ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.