ಬೆಂಗಳೂರು:ಸಬ್ ಅರ್ಬನ್ ರೈಲ್ವೇ ಯೋಜನೆಗೆ ದಿವಂಗತ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಹೆಸರು ಇಡುವುದಾಗಿ ವಿಧಾನಪರಿಷತ್ ನಲ್ಲಿ ಸಚಿವ ವಿ. ಸೋಮಣ್ಣ ಘೋಷಣೆ ಮಾಡಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಸಬರ್ಬನ್ ರೈಲ್ವೇ ಯೋಜನೆ ಬಗ್ಗೆ ಬಿಜೆಪಿ ಸದಸ್ಯ ಗೋಪಿನಾಥ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವ ಸೋಮಣ್ಣ, ಸಬರ್ಬನ್ ರೈಲ್ವೇ ಅನಂತ್ ಕುಮಾರ್ ಅವರ ಕನಸನ ಯೋಜನೆ. ನಾನು ಬಿಜೆಪಿ ಬರಲು ಅವರೇ ಮುಖ್ಯ ಕಾರಣ. ಈ ಯೋಜನೆ ಬೆಂಗಳೂರಿಗೆ ಬರಲು ಸಾಕಷ್ಟು ಶ್ರಮ ಹಾಕಿದ್ದಾರೆ. ಹೀಗಾಗಿ ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಬರ್ಬನ್ ರೈಲ್ವೇ ಯೋಜನೆಗೆ ಅನಂತ್ ಕುಮಾರ್ ಹೆಸರು ಇಡುವ ಚಿಂತನೆ ಇದೆ ಎಂದರು.