ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ( BJP Government ) ವಿರುದ್ಧ ಕಾಂಗ್ರೆಸ್ ( Congress ) ವಿನೂತನ ಅಭಿಯಾನ ಆರಂಭಿಸಿದೆ ಎನ್ನಲಾಗಿದೆ. ಅದರಲ್ಲೂ ಪೇ-ಸಿಎಂ ಪೋಸ್ಟರ್ ( Pay-CM Poster ) ಮಾತ್ರ ಸಿಲಿಕಾನ್ ಸಿಟಿಯಲ್ಲಿ ಪುಲ್ ವೈರಲ್ ಆಗಿವೆ. ಹೀಗಾಗಿಯೇ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಪೋಸ್ಟರ್ ಹಾಕಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ BJP ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ – ಸಿದ್ಧರಾಮಯ್ಯ
ರಾಜಧಾನಿಯ ವಿವಿಧೆಡೆ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ರಾಜ್ಯ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದ್ದು, ಸರ್ಕಾರದ ವಿರುದ್ಧ 40% ಪರ್ಸೆಂಟ್ ಕಮಿಷನ್ ಆರೋಪದ ಪ್ರಚಾರ ತಂತ್ರ ನಡೆಸುತ್ತಿದೆ ಎನ್ನಲಾಗಿದೆ.
ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ, ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ – ಕಾಂಗ್ರೆಸ್
ಇಂದು ಬೆಳಿಗ್ಗೆ ಬೆಂಗಳೂರು ನಗರಾಧ್ಯಂತ ಕ್ಯೂ ಆರ್ ಕೋಡ್ ನೊಂದಿಗೆ ಪೇ-ಸಿಎಂ ಪೋಸ್ಟರ್ ಗಳು ಕಂಡು ಬಂದಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೇ-ಸಿಎಂ ಶೀರ್ಷಿಕೆಯ ಪೋಸ್ಟರ್ ಗಳನ್ನು ಗೋಡೆಗಳ ಮೇಲೆ ಅಂಟಿಸಲಾಗಿದೆ.
BIG NEWS: ನಾಳೆ ಸದನದಲ್ಲೇ ದಾಖಲೆಸಹಿತ ಸಚಿವರೊಬ್ಬರ ಅಕ್ರಮ ಬಯಲು: ಸ್ಪೋಟಕ ಬಾಂಬ್ ಸಿಡಿಸಿದ HDK
ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಕೆಂಡಾಮಂಡಲವಾಗಿರುವಂತ ಬಿಜೆಪಿಯು, ಪೋಸ್ಟರ್ ತೆರವಿಗೆ ಸಂಬಂಧಿಸಿದಂತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಪೋಸ್ಟರ್ ಹಚ್ಚಿದವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಎಫ್ಐಆರ್ ಕೂಡ ದಾಖಲಿಸಲಾಗಿದೆ.