ಶಿವಮೊಗ್ಗ : ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರರರ ಬಂಧನಕ್ಕೆ ಇದೀಗ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಜಬೀವುಲ್ಲಾಗೆ ಐಸಿಸ್ ಮಾತ್ರವಲ್ಲ ಲಷ್ಕರ್ ಇ ತೋಯ್ಬಾ ಉಗ್ರರ ನಂಟು ಕೂಡ ಇದೆ . ಶಿವಮೊಗ್ಗದಲ್ಲಿ ಪ್ರೇಮ್ಸಿಂಗ್ಗೆ ಚಾಕು ಚುಚ್ಚಿದ್ದ ಜಬೀವುಲ್ಲಾ ̤ ಬೆಳಗಾವಿಯಲ್ಲಿ ಜೈಲಿಗೆ ಹೋದಾಗ ಉಗ್ರರ ಸಂಪರ್ಕ ಹೊಂದಿದ್ದಾನೆ ಜಬೀವುಲ್ಲಾ ಮೊಬೈಲ್ನಲ್ಲಿ ಮಾತುಕತೆ ಆಡಿಯೋ ಲಭ್ಯವಾಗಿದೆ. ಮಾಧ್ಯಮಗಳಿಗೆ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್ ‘ ಶಂಕಿತ ಉಗ್ರರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದೇವೆ, ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಮಾಹಿತಿ ನೀಡಿದ್ದರು
ಸದ್ಯ, ಒಟ್ಟು ಮೂವರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಶಿವಮೊಗ್ಗ ದಲ್ಲಿ ಕೂತು ರಾಜ್ಯದ ಹಲವೆಡೆ ಬಾಂಬ್ ಬ್ಲಾಸ್ಟ್ ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಐಸಿಎಸ್ ಉಗ್ರರ ಜತೆಗೆ ಮಂಗಳೂರು-ಶಿವಮೊಗ್ಗ ಲಿಂಕ್ ಕೂಡ ಹೊಂದಿದ ಒಟ್ಟು ಮೂವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದಿದ್ದರು
ರಾಜ್ಯದ ಹಲವು ಕಡೆ ಬಾಂಬ್ ಬ್ಲಾಸ್ಟ್ ಮಾಡೋದಕ್ಕೆ ಪ್ಲ್ಯಾನ್ ಮಾಡ್ತಿದ್ದರು. ಮೂವರು ಶಂಕಿತ ಎ1 ಆರೋಪಿ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾರಿಖ್, ಎ-2 ಮಂಗಳೂರು ಮೂಲದ ಮಾಸ್, ಎಲೆಕ್ಟ್ರಿಕ್ ಇಂಜಿನಿಯರ್ ಆಗಿದ್ದ, ಜತೆಗೆ ಶಿವಮೊಗ್ಗ ಸಿದ್ದೇಶ್ವರ ನಗರದ ಎ-3 ಆರೋಪಿ ಯಾಸಿನ್ ಎಂದು ಗುರುತಿಸಲಾಗಿದೆ.
ಯಾಸಿನ್ ಐಸಿಎಸ್ ಉಗ್ರ ನೇರ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ತೀರ್ಥಹಳ್ಳಿಯ ಶರೀಖ್ ಎಂಬ ಶಂಕಿತ ಉಗ್ರನಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಶಿವಮೊಗ್ಗಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.