ಶಿವಮೊಗ್ಗ: ಐಸಿಸ್ ಉಗ್ರರ ಜೊತೆ ಹೊಂದಿದ್ದ ಆರೋಪದ ಮೇರೆಗೆ ಇಬ್ಬರನ್ನು ಶಂಕಿತ ಭಯೋತ್ಪದಕರನ್ನು ಪೋಲಿಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತ ಉಗ್ರರ ಮೋಬೈಲ್ನಲ್ಲಿದ್ದ ವಿಡಿಯೋಗಳನ್ನು ನೋಡಿ ಶಿವಮೊಗ್ಗ ಪೋಲಿಸರು ಬೆಚ್ಚಿ ಬಿದಿದ್ದಾರೆ ಎನ್ನಲಾಗಿದ್ದು, ಬಂಧಿತ ಶಂಕಿತರ ಉಗ್ರರ ಮೊಬೈಲ್ನಲ್ಲಿ ಬಾಂಬ್ ತಯಾರಿಕೆ ವಿಡಿಯೋಗಳು ಕೂಡ ಇದ್ದಾವೆ ಎನ್ನಲಾಗಿದೆ.
ಐಸಿಸ್ ಜೊತೆ ನಂಟು ಹೊಂದಿದ್ದ ಆರೋಪದಡಿ ಯಾಸಿನ್ ಶಾರಿಖ್ ಹಾಗೂ ಮಾಜ್ ಬಂಧಿಸಲಾಗಿದ್ದು, ಈನಡುವೆ ವೈರ್ ಆಪ್ ಮೂಲಕ ಇತರೆ ಸಹಚರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎನ್ನುವ ಮಾಹಿತಿಯನ್ನು ಪೋಲಿಸರು ವಿಚಾರಣೆ ವೇಳೆ ಮಾಹಿತಿ ಪಡೆದುಕೊಂಡಿದ್ದಾರೆ. ಶಂಕಿತ ಉಗ್ರ ಮಂಗಳೂರು ಮೂಲದ ಮಾಜ್ ಮುನೀರ್ ಅಹಮದ್ ಹಾಗೂ ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್, ಮತ್ತೊಬ್ಬ ಶಂಕಿತ ಉಗ್ರ ತೀರ್ಥಹಳ್ಳಿಯ ಶಾರೀಕ್ ಮಹಮ್ಮದ್ ನನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
ಇದಲ್ಲದೇ ಯಾಸೀನ್ ಶಿವಮೊಗ್ಗ ನಗರದ ಹಳೇ ಗುರುಪುರ ಪ್ರದೇಶದ ಅಡಿಕೆತೋಟದ ಬಳಿ ತುಂಗಾ ನದಿದಡದಲ್ಲಿ 10-12 ಸಲ ಬಾಂಬ್ ಸ್ಫೋಟ ಟ್ರಯಲ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಯಾಸಿನ್ ಹಾಗೂ ಮಾಜ್ ಸೇರಿ ಬಾಂಬ್ ತಯಾರಿಸಲಾರಂಭಿಸಿದ್ದನಂತೆ. ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯ ಪ್ರೆಸಿಡೆನ್ಸಿ ಅವೆನ್ಯೂ ಫ್ಲ್ಯಾಟ್ ಮಹಜರು ನಡೆದಿದೆ ಪೊಲೀಸರ ತಂಡ ಮಂಗಳೂರಿಗೆ ಭೇಟಿ ನೀಡಿ ಹಲವು ಪ್ರಮುಖ ಮಾಹಿತಿಗಳನ್ನು ಕಲೆ ಹಾಕಿದ್ದು, ಆರೋಪಿಗಳ ಬಾಯ್ಬಿಡಿಸಲು ಎಲ್ಲಾ ಸಿದ್ದತೆಯನ್ನು ಮಾಡುತ್ತಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ಬಂಧಿತ ಇಬ್ಬರು ಶಂಕಿತ ಉಗ್ರರನ್ನು ಕೋರ್ಟ್ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳು ಉಳಿದುಕೊಂಡ ಸ್ಥಳ ಮಹಜರು ನಡೆಸಲಾಗಿದೆ.