ಶಿವಮೊಗ್ಗ : ನಾನು 26 ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ , ನನ್ನ ಮಗ ಇಂತಹ ಕೆಲಸ ಮಾಡುತ್ತಾನೆ ಎಂದು ಅಂದುಕೊಂಡಿರಲಿಲ್ಲ, ನನಗೆ ದಿಕ್ಕು ತೋಚದ ಹಾಗೆ ಹಾಗಿದೆ ಎಂದು ಉಗ್ರ ಮತೀನ್ ತಂದೆ ಮನ್ಸೂರ್ ಅಹಮ್ಮದ್ ಅಳಲು ತೋಡಿಕೊಂಡಿದ್ದಾರೆ.
ಎಂಜಿನಿಯರ್ ಓದೋಕೆ ಅಂತ ಬೆಂಗಳೂರಿಗೆ ಹೋಗಿದ್ದ, ಆಮೇಲೆ ಎಂಜಿನಿಯರ್ ಅರ್ಧಕ್ಕೆ ಬಿಟ್ಟು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದನು. ಅವನಿಗೆ ಎಲ್ಲಿಂದ ಉಗ್ರರ ಲಿಂಗ್ ಸಿಕ್ಕಿತೋ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ಮೂವರು ಶಂಕಿತ ಉಗ್ರರನ್ನು 9 ದಿನ ಪೊಲೀಸ್ ಕಸ್ಟಡಿಗೆ ನೀಡಿ ಶಿವಮೊಗ್ಗ ಕೋರ್ಟ್ ಆದೇಶ ಹೊರಡಿಸಿದೆ. ಶಿವಮೊಗ್ಗದ ಮೂರನೇ ಜೆಎಂಎಫ್ ಸಿ ನ್ಯಾಯಾಲಯ ಮೂವರು ಶಂಕಿತ ಉಗ್ರರನ್ನು 9 ದಿನಗಳ ಕಾಲ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಮಂಗಳೂರಿನಲ್ಲಿ ಅನ್ಸರ್ ಎಂಬ ಶಂಕಿತ ಉಗ್ರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಅಜ್ಞಾತ ಸ್ಥಳದಲ್ಲಿಟ್ಟುಕೊಂಡು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಹಾಗೂ ಮಾಜ್ ಎನ್ನುವವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸೆ.30 ಮೈ ಶುಗರ್ ಸಕ್ಕರೆ ಕಾರ್ಖಾನೆ ಸಂಪೂರ್ಣ ಕಾರ್ಯಚರಣೆ: ಕೆ.ಗೋಪಾಲಯ್ಯ
HEALTH TIPS : ನೀವು ಆರೋಗ್ಯದಿಂದಿರಲು ಈ 5 ಆಹಾರ ಸಂಯೋಜನೆಗಳ ಸೇವನೆ ತಪ್ಪಿಸಿ | food combinations