ಚಿತ್ರದುರ್ಗ : ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ಬೆನ್ನಲ್ಲೇ ಇದೀಗ ಚಿತ್ರದುರ್ಗದ ಮುರುಘಾಮಠದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಮುರುಘಾಮಠದಲ್ಲಿದ್ದ ಜಿಂಕೆಗಳು ಮತ್ತು ಕೃಷ್ಣಮೃಗ ನಾಪತ್ತೆಯಾಗಿವೆ ಎಂದು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
BIGG BREAKING NEWS : ಹಾಸ್ಯನಟ ರಾಜು ಶ್ರೀವಾಸ್ತವ ಇನ್ನಿಲ್ಲ | Comedian Raju Srivastava passes away
ವಕೀಲ ಮಧುಕುಮಾರ್ ಎಂಬುವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮುರುಘಾಮಠದಲ್ಲಿ 40 ಕ್ಕೂ ಹೆಚ್ಚು ಜಿಂಕೆಗಳು ಮತ್ತು ಕೃಷ್ಣ ಮೃಗಗಳು ಇದ್ದವು. 2008 ರಿಂದಲೇ ಇವುಗಳು ನಾಪತ್ತೆಯಾಗಲು ಶುರುವಾಗಿವೆ. ಇವುಗಳನ್ನು ಮಠದವರು ಕೊಲ್ಲಿಸಿರುವ ಇಲ್ಲವೇ ಮಾರಾಟ ಮಾಡಿರುವ ಶಂಕೆಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಠದಲ್ಲಿರುವ ಜಿಂಕೆಗಳು ನಾಪತ್ತೆಯಾಗಿದ್ದು, ಇವುಗಳನ್ನು ಕೊಲ್ಲಲಾಗಿದೆ. ಅಥವಾ ಮರಾಟ ಮಾಡಿರಬಹುದು. ಈ ಪ್ರಾಣಿಗಳ ಚರ್ಮ ಮತ್ತು ಕೋಡಿಗೆ ಒಳ್ಳೆಯ ಬೆಲೆ ಇದ್ದು, ಜಿಂಕೆ ಹಾಗೂ ಕೃಷ್ಣಮೃಗಗಳನ್ನು ಕೊಂದು ಪ್ರತ್ಯೇಕಿಸಿ ಮಾರಾಟ ಮಾಡಿರುವ ಸಾಧ್ಯತೆಗಳಿವೆ ಎಂದು ವಕೀಲ ಮಧುಕುಮಾರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.