ಉಡುಪಿ : ಬೀದಿಯಲ್ಲಿ ಬೀದಿಯಲ್ಲಿ ಬಿಜೆಪಿ ಸರ್ಕಾರದ ಮಾನ ಮರ್ಯಾದೆ ತೆಗಿತೀನಿ ಎಂದು ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ.
ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿಯಲ್ಲಿ ಮಾತನಾಡಿದವರು ಕಲಬುರಗಿ ಗಣೇಶೋತ್ಸವಕ್ಕೆ ತಮಗೆ ಪ್ರವೇಶ ನಿಷೇಧ ವಿಧಿಸಿರುವ ವಿಚಾರವಾಗಿ ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ತಡೆಯುತ್ತಿರುವುದು ಮುತಾಲಿಕ್ನನ್ನು ಅಲ್ಲ; ಹಿಂದುತ್ವವನ್ನು! ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ತಡೆದು ದ್ರೋಹ ಮಾಡ್ತಿದ್ದೀರಿ. ಇದು ಸಂವಿಧಾನ ವಿರೋಧಿ ನಡೆ, ಕಾಂಗ್ರೆಸ್ ಅವಧಿಯಲ್ಲಿ ನಿಷೇಧಿಸಿದಾಗ ನೀವು ವಿರೋಧ ಮಾಡಿದ್ದೀರಿ ಎಂದು ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುಮ್ಮನಹಳ್ಳಿ ಮೇಲ್ಸೇತುವೆಯಲ್ಲಿ ರಂಧ್ರ : ಸೆ.22 ರಿಂದ ದುರಸ್ಥಿ ಕಾರ್ಯಾಚರಣೆ ಪ್ರಾರಂಭ