ಬೆಂಗಳೂರು : ಹೇಳಿದ ಹಾಗೆ ಬಟ್ಟೆ ಹೊಲಿದಿಲ್ಲವೆಂದು ಗ್ರಾಹಕನೊಬ್ಬ ಟೈಲರ್ ವಿರುದ್ಧ ಕೋರ್ಟ್ ಗೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಗ್ರಾಹಕ ಹಕ್ಕು ನ್ಯಾಯಾಲಯ ಟೈಲರ್ ಗೆ ಬರೋಬ್ಬರಿ 10 ಸಾವಿರ ರೂ ದಂಡ ನೀಡುವಂತೆ ಸೂಚನೆ ನೀಡಿದೆ.
ರಾಯಣ್ಣಗೌಡ ಎಂಬುವವರು ಈ ದೂರು ನೀಡಿದ್ದು,ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು 10000 ರೂ ದಂಡ ವಿಧಿಸಿದ್ದಾರೆ. ವಿಜಯಪುರದ ನಿವಾಸಿ ರಾಯಣ್ಣ ಗೌಡ ಎಂಬುವರು 2016 ರಲ್ಲಿ ಬೆಂಗಳೂರಿನಲ್ಲಿ 1988 ರೂ.ಗಳ ಬ್ರ್ಯಾಂಡೆಡ್ ಪ್ಯಾಂಟ್ ಬಟ್ಟೆ ಖರೀದಿಸಿ ಅದೇ ಅಂಗಡಿಯ ಟೈಲರ್ ಬಳಿ ಹೊಲಿಯಲು ಕೊಟ್ಟಿದ್ರು.
ನಂತರ 2017ರಲ್ಲಿ ಪ್ಯಾಂಟ್ ಕಾಲಿನ ಭಾಗದಲ್ಲಿ ಹರಿದು ಹೋಗಿ ಬಟ್ಟೆವಿನ್ಯಾಸ ಹಾಳಾಗಿತ್ತು. ನಂತರ ಟೈಲರ್ ಹೊಸ ಪ್ಯಾಂಟ್ ಹೊಲಿದು ಕೊಡುವುದಾಗಿ ಭರವಸೆ ನೀಡಿದ್ದರು,. ನಂತರ ಕೆಲ ದಿನ ಬಿಟ್ಟು ಹೋದಾಗ ಟೈಲರ್ ಪ್ಯಾಂಟ್ ಹೊಲಿದಿಲ್ಲ ಎಂದು ಸಬೂಬು ಹೇಳಿದ್ದಾನೆ. ಸುಮಾರು ಹೀಗೆ ಐದಾರು ಬಾರಿ ರಾಯಣ್ಣನನ್ನು ಅಲೆದಾಡಿಸಿದ್ದರು . ಇದರಿಂದ ಬೇಸರಗೊಂಡ ರಾಯಣ್ಣ ಮತ್ತೆ 2017 ರ ಫೆ.7 ರಂದು ಟೈಲರ್ ನನ್ನು ಸಂಪರ್ಕ ಮಾಡುತ್ತಾರೆ. ನಂತರ ಟೈಲರ್ ನೀವು ಖರೀದಿಸಿದ ಬಟ್ಟೆಯ ಗುಣಮಟ್ಟ ಸರಿಇಲ್ಲವೆಂದು ಹೇಳುತ್ತಾರೆ. ಇದರಿಂದ ಬೇಸರಗೊಂಡಿದ್ದ ರಾಯಣ್ಣ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸುತ್ತಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು 10000 ರೂ ದಂಡ ವಿಧಿಸಿದ್ದಾರೆ.
JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ಕೋರ್ಟ್ ನಲ್ಲಿ ಉದ್ಯೋಗವಕಾಶ |Job in Court