ನವದೆಹಲಿ: ಪಕ್ಷದ ಧ್ಯೇಯವಾಕ್ಯವಾದ ‘ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ಅನ್ನು ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಿಜೆಪಿ ಮೇಯರ್ಗಳಿಗೆ ನಿರ್ದೇಶನ ನೀಡಿದರು ಇದೇ ವೇಳೇ ಅವರು ದೇಶವು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ನಂಬುತ್ತದೆ ಎಂದು ಪ್ರತಿಪಾದಿಸಿದರು.
ಗುಜರಾತ್ನ ಗಾಂಧಿನಗರದಲ್ಲಿ ಬಿಜೆಪಿಯ ಮೇಯರ್ ಮತ್ತು ಉಪಮೇಯರ್ಗಳ ಕೌನ್ಸಿಲ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಆಜಾದಿ ಕಾ ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ಮುಂದಿನ 25 ವರ್ಷಗಳ ಕಾಲ ಭಾರತದ ನಗರಾಭಿವೃದ್ಧಿಯ ರೂಪುರೇಷೆಯನ್ನು ತಯಾರಿಸುವಲ್ಲಿ ಈ ಸಮಾವೇಶವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. “ನಮ್ಮ ದೇಶವು ಬಿಜೆಪಿಯನ್ನು ನಂಬುತ್ತದೆ. ತಳಮಟ್ಟದಿಂದ ಕೆಲಸ ಮಾಡುವುದು ಎಲ್ಲಾ ಮೇಯರ್ ಗಳ ಜವಾಬ್ದಾರಿಯಾಗಿದೆ. ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಬೆಳವಣಿಗೆಯನ್ನು ಉತ್ತಮವಾಗಿ ಯೋಜಿಸಬೇಕು” ಎಂದು ಅವರು ಮೇಯರ್ ಗಳಿಗೆ ತಿಳಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲರು ಮೇಯರ್ ಆಗಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಉತ್ತಮ ಭಾರತಕ್ಕಾಗಿ ತಮ್ಮ ಮಾರ್ಗವನ್ನು ಅನುಸರಿಸುವಂತೆ ಮತ್ತು ಅದರ ಅಭಿವೃದ್ಧಿಗೆ ಶ್ರಮಿಸುವಂತೆ ಸಮ್ಮೇಳನದಲ್ಲಿ ಉಪಸ್ಥಿತರಿದ್ದ ಎಲ್ಲ ಮೇಯರ್ ಗಳನ್ನು ಒತ್ತಾಯಿಸಿದರು. ಎಲ್ಲಾ ಮೇಯರ್ ಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ಪ್ರಯಾಸ್ ಗಳನ್ನು ಅನುಸರಿಸಬೇಕು ಅಂಥ ಅವರು ತಿಳಿಸಿದರು. ಹಿಂದಿನ ಆಡಳಿತ ಮತ್ತು ಅವರ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ಹೋಲಿಸಿದ ಅವರು, 2014 ರವರೆಗೆ, ದೇಶದಲ್ಲಿ ಮೆಟ್ರೋ ಜಾಲವು 250 ಕಿಲೋಮೀಟರ್ ಗಿಂತ ಕಡಿಮೆ ಉದ್ದವಿತ್ತು ಆದರೆ ಇಂದು ದೇಶದಲ್ಲಿ ಮೆಟ್ರೋ ಜಾಲವು 775 ಕಿಲೋಮೀಟರ್ ಗಿಂತ ಹೆಚ್ಚಾಗಿದೆ ಎಂದು ಹೇಳಿದರು.
Addressing the @BJP4India Mayors' Conclave. https://t.co/UxEG3nmWNt
— Narendra Modi (@narendramodi) September 20, 2022