ಬೆಂಗಳೂರು : ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಧಾನಪರಿಷತ್ನಲ್ಲಿ ನಿನ್ನೆಯೇ ತಿಳಿಸಿದ್ದಾರೆ
ಪ್ರಶ್ನೋತ್ತರ ಅವದಿಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 7 ದಶಕಗಳಲ್ಲಿ ಕಾಣದ ಮಳೆ ಈ ಬಾರಿ ಬೆಂಗಳೂರಿನಲ್ಲಿ ಬಂದಿದೆ.ಇದರಿಂದ ಸಹಜವಾಗಿಯೇ ಹೆಚ್ಚು ಹಾನಿ ಸಂಭವಿಸಿದೆ. ಇದಕ್ಕೆ ಒಂದೇ ಸರ್ಕಾರ ಅಥವಾ ಒಂದೇ ಪಕ್ಷ ಕಾರಣವಲ್ಲ..ಇದರಲ್ಲಿ ಎಲ್ಲರೂ ಭಾಗಿದಾರರಾಗಿದ್ದೇವೆ ಎಂದರು.
ರಾಜಕಾಲುವೆ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಅನಧಿಕೃತ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಉತ್ತರಿಸಿದರು.
ಒತ್ತುವರಿಯಿಂದಾಗಿ ಬೆಂಗಳೂರಿನಲ್ಲಿ ಮಳೆಹಾನಿ ಉಂಟಾಗುತ್ತಿದ್ದು, ಸರ್ಕಾರ ಯಾರ ಪ್ರಭಾವಕ್ಕು ಒಳಗಾಗದೆ ಮುಲಾಜಿಲ್ಲದೆ ರಾಜಕಾಲುವೆಗಳ ಒತ್ತುವರಿಯನ್ನು ತೆರವು ಮಾಡಲಾಗುವುದು ಎಂದು ತಿಳಿಸಿದರು.