ಕಲಬುರಗಿ : 9,000 ರೂ.ಗಳ ಸಾಲವನ್ನು ಮರುಪಾವತಿಸದಿದ್ದಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
BIGG NEWS : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣ : ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ
ಕಲಬುರಗಿಯ ನಿವಾಸಿ ಸಮೀರ್ ಎಂಬಾತ ಜಮೀರ್ ಗೆ 9,000 ರೂ. ಸಾಲ ನೀಡಿದ್ದು, ಸಮೀರ್ ಸಾಲ ವಾಪಸ್ ಕೇಳಿದ್ದಾನೆ. ಆದರೆ ಸಾಲ ಮರುಪಾವತಿಸದೇ ತಪ್ಪಿಸಿಕೊಂಡು ಓಡಾಡುತ್ತಿದ್ದ ಜಮೀರ್ ಶನಿವಾರ ರಸ್ತೆ ದಾಟುತ್ತಿದ್ದ ವೇಳೆ ಸಮೀರ್ ತನ್ನ ಸ್ನೇಹಿತ ಆಕಾಶ್ ನೊಂದಿಗೆ ಜಮೀರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಜಮೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
BREAKING NEWS: ಮೆಕ್ಸಿಕೋದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಓರ್ವ ಸಾವು | Earthquake in Mexico
ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ಅವಲೋಕಿಸಿದರು. ಪೊಲೀಸರು ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.