ದೆಹಲಿ: ಭಾರತದ ಹಿರಿಯ ಕ್ವಾರ್ಟರ್-ಮೈಲರ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತೆ ಹಾಗೂ ಕರ್ನಾಟಕದ ಅಥ್ಲೀಟ್ ಎಂಆರ್ ಪೂವಮ್ಮ(Poovamma)ಗೆ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿ (ADAP) ಎರಡು ವರ್ಷಗಳ ನಿಷೇಧವನ್ನು ಶಿಕ್ಷೆ ವಿಧಿಸಿದೆ.
32 ವರ್ಷದ ಪೂವಮ್ಮ ಅವರು ಕಳೆದ ವರ್ಷ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ ಅವರ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಅವರು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ರದ್ದು ಮಾಡಿದ್ದ ಉತ್ತೇಜಕ ಮೀಥೈಲ್ಹೆಕ್ಸಾನಿಯಮೈನ್ಗೆ ತೆಗೆದುಕೊಂಡಿದ್ದು ಪಾಸಿಟಿವ್ ಬಂದ ಕಾರಣ ಅವರನ್ನು ಮೂರು ತಿಂಗಳ ಅಮಾನತುಗೊಳಿಸಿತ್ತು.
ಶಿಸ್ತಿನ ಸಮಿತಿಯ ನಿರ್ಧಾರದ ವಿರುದ್ಧ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿ (ನಾಡಾ) ಮೇಲ್ಮನವಿ ಸಲ್ಲಿಸಿತ್ತು. ನಾಡಾದ ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿಯು ವಿಚಾರಣೆ ಮೇಲ್ಮನವಿ ಅಂಗೀಕರಿಸಿದ ಬಳಿಕ ಪೂವಮ್ಮ ಅವರಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ ನೀಡಿದೆ. ಅಷ್ಟೇ ಅಲ್ಲದೇ, ಅವರು ಗೆದ್ದ ಪದಕಗಳನ್ನೂ ಮುಟ್ಟುಗೋಲು ಹಾಕಲಾಗುವುದು ಎಂದು ಎಡಿಎಪಿ ಮುಖ್ಯಸ್ಥ ಅಭಿನವ್ ಮುಖರ್ಜಿ ಸೆಪ್ಟೆಂಬರ್ 16 ರಂದು ನೀಡಿದ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
BREAKING NEWS: ಮೆಕ್ಸಿಕೋದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಓರ್ವ ಸಾವು | Earthquake in Mexico
BIGG NEWS : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣ : ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ