ಮೆಕ್ಸಿಕೋ: ಮೆಕ್ಸಿಕೋದ ಪಶ್ಚಿಮ ಭಾಗದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. 1985 ಮತ್ತು 2017 ರಲ್ಲಿ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪನದ ವಾರ್ಷಿಕೋತ್ಸವದಂದೇ ಈ ಘಟನೆ ಮರುಕಳಿಸಿದೆ.
ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯ ನಂತರ (16:00 GMT) ಭೂಕಂಪ ಸಂಭವಿಸಿದೆ. US ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಮೈಕೋಕಾನ್ ಮತ್ತು ಕೊಲಿಮಾ ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿ ಭೂಮಿಯಿಂದ 15km (9 ಮೈಲುಗಳಷ್ಟು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.
Another terrible video of 7.6 magnitude #earthquake in western #Michoacán, #Mexico.#Terremoto pic.twitter.com/uzQ9hqYimZ
— Wali Khan (@WaliKhan_TK) September 19, 2022
Powerful 7.6 Magnitude #Earthquake strikes in #Mexico
Dates of Earthquake’s in Mexico:
– 19th September 1985
– 19th September 2017
– 19th September 2022#Tsunami #MexicoCity pic.twitter.com/FRYmShKcZ0— Himanshu dixit 🇮🇳💙 (@HimanshuDixitt) September 19, 2022
ಭೂಕಂಪದಿಂದಾಗಿ ಹಲವು ಮನೆಗಳು ಹಾನಿಗೊಳಗಾಗಿವೆ. ಮನೆ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಪೆಸಿಫಿಕ್ ಬಂದರಿನ ಮಂಜನಿಲ್ಲೊದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಮಾಹಿತಿ ನೀಡಿದ್ದಾರೆ.
1985 ಸೆಪ್ಟೆಂಬರ್ 19 ರಂದು 8.1 ರ ತೀವ್ರತೆಯ ಭೂಕಂಪನ ಸಂಭವಿಸಿ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ನಂತರ 2017 ರಲ್ಲಿ ಈ ಭೂಕಂಪನದ ವಾರ್ಷಿಕೋತ್ಸವದ ದಿನವೇ ಮತ್ತೆ 7.1 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿ 370 ಮಂದಿ ಸಾವನ್ನಪ್ಪಿದ್ದರು. ಇದೀಗ ಅದೇ ದಿನ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
BIGG NEWS : ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಇಂದು ಸಿಎಂ ಮನೆ ಮುಂದೆ ಧರಣಿ : ಕೂಡಲಸಂಗಮಶ್ರೀ
BIGG NEWS : ವಸತಿ ರಹಿತ ಗ್ರಾಮೀಣ ಬಡಜನತೆಗೆ ಗುಡ್ ನ್ಯೂಸ್ : ಗ್ರಾ.ಪಂ ಮಟ್ಟದಲ್ಲೇ ಫಲಾನುಭವಿ ಆಯ್ಕೆ