ನವದೆಹಲಿ: ದೆಹಲಿಯಲ್ಲಿ 30 ವರ್ಷದ ನೈಜೀರಿಯಾದ ಮಹಿಳೆಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದು ನಗರದ ಒಂಬತ್ತನೇ ಮತ್ತು ಭಾರತದ 14ನೇ ಸೋಂಕಿನ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಸೆಪ್ಟೆಂಬರ್ 16 ರಂದು ಮಹಿಳೆಯನ್ನು ಜನನಾಂಗಗಳ ಮೇಲೆ ಗುಳ್ಳೆಗಳು ಮತ್ತು ಕೀವು ತುಂಬಿದ ಗಾಯಗಳೊಂದಿಗೆ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಾಗಿದ್ದರು, ಆಕೆಯ ಪರೀಕ್ಷಾ ವರದಿ ಭಾನುವಾರ ಬಂದಿದೆ ಎಂದು ಅವರು ಹೇಳಿದರು.
BIG NEWS: ಲಂಚ ಪ್ರಕರಣ: ಬಿಎಸ್ವೈ ಮೇಲ್ಮನವಿ ಅರ್ಜಿ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ನವದೆಹಲಿ: ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ವಿರುದ್ದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಸುಪ್ರಿಂಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆಯು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠದ ಮುಂದೆ ಬಂದಿತು. ಇದೇ ವೇಳೆ ನ್ಯಾಯಾಪೀಠವು ಮಾಜಿ ಸಿಎಂ ಯಡಿಯೂರಪ್ಪ ಮತ್ತು ವರ ಕುಟುಂಬದವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದೆ.
ಪ್ರಕರಣದ ಹಿನ್ನಲೆ: ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಬಿಎಸ್ವೈ ಹಾಗೂ ಅವರ ಕುಟುಂಬದವರ ಮೇಲೆ 12ಕೋಟಿ ಲಂಚ ತೆಗೆದುಕೊಂಡಿದ್ದರು ಅಂತ ಆರೋಪಿಸಿ ಜನಪ್ರತಿನಿಧಿಗಳ ಕೋರ್ಟ್ ಗೆ ದೂರು ನೀಡಿದ್ದರು, ಇದೇ ವೇಳೆ ಜನಪ್ರತಿನಿಧಿಗಳ ಕೋರ್ಟ್ ನವೆಂಬರ್ 2, 2022 ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ. ಇದರಲ್ಲಿ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ಮಾಡಿದ್ದರು. ಇದರ ವಿರುದ್ದ ಮಾಜಿ ಸಿಎಂ ಹೈಕೋರ್ಟ್ ಹಾಗೂ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.