ಬೆಂಗಳೂರು: ವಿಧಾನಪರಿಷತ್ ನಲ್ಲಿ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಆಕ್ರೋಶಗೊಂಡು, ತರಾಟೆಗೆ ತೆಗೆದುಕೊಂಡು ಘಟನೆ ನಡೆದಿದೆ.
BIGG BREAKING NEWS: ಎಲೆಕ್ಷನ್ ಹೊತ್ತನಲ್ಲಿ ಡಿಕೆಶಿಗೆ ಇನ್ನೊಂದು ಶಾಕ್; ED ಬೆನ್ನಲ್ಲೇ ಐಟಿ ಶಾಕ್
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ಸಂಕನೂರು, ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಆರ್ಥಿಕ ಇಲಾಖೆ ಕಡೆ ಬೊಟ್ಟು ಮಾಡಿ ತೋರಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸಚಿವರ ವಿರುದ್ದ ಕಿಡಿಕಾರಿದರು. ಎಲ್ಲಾ ಪ್ರಶ್ನೆಗೂ ಆರ್ಥಿಕ ಇಲಾಖೆ ಅನುಮತಿಬೇಕು ಅನ್ನೋದು ಯಾಕೆ? ಹಾಗಾದ್ರೆ ಸಚಿವರು ಯಾಕೆ ಕೆಲಸ ಮಾಡಬೇಕು. ಮತ್ತೆ ಸಚಿವರು ಹೀಗೆ ಬೇಜವಾಬ್ದಾರಿ ಉತ್ತರ ಕೊಡಬಾರದು ಅಂತ ಕಿಡಿಕಾರಿದರು.
BIGG BREAKING NEWS: ಎಲೆಕ್ಷನ್ ಹೊತ್ತನಲ್ಲಿ ಡಿಕೆಶಿಗೆ ಇನ್ನೊಂದು ಶಾಕ್; ED ಬೆನ್ನಲ್ಲೇ ಐಟಿ ಶಾಕ್
ಯಾವುದೇ ಇಲಾಖೆಗೆ ಅರ್ಥಿಕ ಇಲಾಖೆ ಬಳಿ ಹಣ ಪಡೆಯೋದು ನಿಮ್ಮ ಕರ್ತವ್ಯ. ಅದು ಬಿಟ್ಟು ಇಲಾಖೆ ಮೇಲೆ ಬೊಟ್ಟು ತೋರಿಸಿದ್ರೆ ಹೇಗೆ? ಇದು ಸರಿಯಾದ ಉತ್ತರ ಅಲ್ಲ. ಇನ್ಯಾವತ್ತೂ ಆರ್ಥಿಕ ಇಲಾಖೆ ಅನುಮತಿ ಅಂತ ಹೇಳಬಾರದು. ಈ ಬಗ್ಗೆ ಸಚಿವರು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರ ಕೊಡಬೇಕು ಎಂದು ಸಚಿವರ ಮೇಲೆ ಗರಂ ಆದರು.