ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಪಕ್ಕದಲ್ಲಿದ್ದ ಪಿಜಿಯಲ್ಲೇ ಖದೀಮರು ಕಳ್ಳತನ ಮಾಡಿದ್ದು, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಹೊತ್ತೊಯ್ದಿದ್ದಾರೆ.
ಹೌದು, ಬೆಂಗಳೂರಿನ ಆರ್ ಟಿ ನಗರದ ಪಿಜಿಯೊಂದರಲ್ಲಿ ಈ ಕಳ್ಳತನ ನಡೆದಿದೆ. ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ನಿನ್ನೆ ಬೆಳಗ್ಗೆ 7 ಗಂಟೆ ವೇಳೆಗೆ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಶಶಾಂಕ್ ಮಾಲ್ವಿಯಾ ಎಂಬುವವರು ನಗರ ಪೊಲೀಸರಿಗೆ ದೂರು ನೀಡಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಮನವಿ ಮಾಡಿದ್ದಾರೆ. ಅದೇ ರೀತಿ ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಸದ್ಯ ಈ ಘಟನಾವಳಿಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
BIGG NEWS: ಸಿಲಿಕಾನ್ ಸಿಟಿಯಲ್ಲಿ ಅಶ್ಲೀಲ ಫೋಟೋ ತೆಗೆದು ಹರಿಬಿಟ್ಟ ಪ್ರಿಯಕರನನ್ನೇ ಕೊಲೆಗೈದ ಪ್ರಿಯತಮೆ