ಮೈಸೂರು : 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಭಾಗಿಯಾಗಿದ್ದ ಮೈಸೂರಿನ ಪಿಎಸ್ ಐ ಅಶ್ವಿನಿ ಅಮಾನತು ಮಾಡಲಾಗಿದೆ .
ಮೈಸೂರಿನ ಎನ್. ಆರ್. ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿದ್ದ ಬಾಗಲಕೋಟೆಯ ಜಮಖಂಡಿಯ ಮೂಲದ ಅಶ್ವಿನಿ ಅನಂತಪುರ ಅವರನ್ನು ಅಮಾನತುಗೊಳಿಸಿ ಮೈಸೂರು ನಗರ ಪೊಲೀಸ್ ಕಮೀಷನರ್ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
PSI ಕೆಲಸ ಬೇಕು ಅಂದ್ರೆ ಮೊದಲು ಲಂಚ ಕೊಡು ಎಂದು PSI ಅಭ್ಯರ್ಥಿ ಸಂಗಮೇಶ್ ಜೊತೆ ನಡೆಸಿದ್ಧ ಸಂಭಾಷಣೆ ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಅಶ್ವಿನಿ ಅವರು ಸಂಗಮೇಶ್ ಬಳಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಇದೇ ವೇಳೆ ಬೆಸ್ಕಾಂ, ಚೆಸ್ಕಾಂ, FDI ಹೀಗೆ ಹಲವು ಹುದ್ದೆಗಳಿಗೂ ಡೀಲ್ ಮಾಡುವ ಕುರಿತು ಮಾತುಕತೆ ನಡೆಸಲಾಗಿತ್ತು ಎನ್ನಲಾಗಿದೆ.
ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ : ಸಿಎಜಿ ವರದಿ ಜಾರಿಗೆ ಸಮಿತಿ ರಚಿಸಲು BBMP ಗೆ ಸೂಚನೆ