ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ವಿಪತ್ತು ಸಂಭವಿಸುವ ಸ್ಥಳಗಳಲ್ಲಿ ತುರ್ತು ಕಾರ್ಯಾಚರಣೆಗಾಗಿ ಪ್ರವಾಹ ನಿರ್ವಹಣಾ ಘಟಕ ತೆರೆಯಲಾಗುವುದು ಎಂದು ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್ . ಅಶೋಕ್ ಹೇಳಿದ್ದಾರೆ.
ಕಳೆದ ವಾರ ಸುರಿದ ಮಳೆ ಹಾನಿಗೆ ಸಂಬಂಧಪಟ್ಟಂತೆ ಕಳೆದೊಂದು ವಾರದಿಂದ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಇಂಥ ಘಟಕವನ್ನು ಪ್ರಾರಂಭ ಮಾಡಿದೆ.ಪದೇ ಪದೇ ವಿಪತ್ತು ಜರುಗುವ ಸ್ಥಳವನ್ನು ಮೊದಲೇ ಗುರುತಿಸಿ ಅಂಥ ಕಡೆ ಈ ಘಟಕವನ್ನು ನಿಯೋಜಿಸಿದ್ದೇವೆ. ತುರ್ತು ರಕ್ಷಣೆಗೆ ಅಗತ್ಯವಾದ ಎಲ್ಲ ಸಲಕರಣೆಗಳು ಈ ತಂಡದಲ್ಲ ಇರುತ್ತೇವೆ ಎಂದರು