ಬೆಂಗಳೂರು: ವಿಧಾನಸಭೆಯ ಉಪ ಸಭಾಪತಿ ಆನಂದ ಮಾಮನಿ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚೆನ್ನೈನಿಂದ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ಆನಂದ ಮಾಮನಿ ಅವರನ್ನ ಸ್ಥಳಾಂತರಿಸಲಾಗಿದೆ.
BREAKING NEWS: ಈ ವರ್ಷದಿಂದಲೇ ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಬೋಧನೆ; ಬಿ.ಸಿ ನಾಗೇಶ್
ಹೀಗಾಗಿ ಆಸ್ಪತ್ರೆಗೆ ಸ್ವಾಮೀಜಿ ಸೇರಿದಂತೆ ಕೆಲ ಶಾಸಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ನಂತರ ಮಾತನಾಡಿದ ಅವರು, ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕ ಪಡುವುದು ಬೇಡ,ಆದಷ್ಟು ಬೇಗ ಆನಂದ ಮಾಮನಿ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸೊಣ ಎಂದರು.
ಕಳೆದ ಹಲವು ದಿನಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಆನಂದ ಮಾಮನಿ ಅವರನ್ನು ಚನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತು.