ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಇಡಿ ವಿಚಾರಣೆ ಕುರಿತು ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಇದು ರಾಝಕೀಯ ಪ್ರಚೋದನೆಯಿಂದ ದಾಖಲಿಸಿದ ದೂರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2 ವರ್ಷದ ಹಿಂದೆ ಡಿಕೆಶಿ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ನೀಡಲಾಗಿದೆ. ಇದು ರಾಜಕೀಯ ಪ್ರಚೋದನೆಯಿಂದ ದಾಖಲಿಸಿದ ದೂರು. ಮತ್ತೊಮ್ಮೆ ದಾಖಲೆ ಕೇಳಿದ್ದಾರೆ. ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ. ಕಾಂಗ್ರೆಸ್ ಕಟ್ಟಿಹಾಕಲು ಪ್ರಯತ್ನ ಆಗ್ತಿದೆ. ಅದು ಸಾಧ್ಯವಾಗಲ್ಲ. ಅರೆಸ್ಟ್ ಮಾಡಲಿ, ಜೈಲಿಗೆ ಹಾಕಲಿ, ನಾವು ಹೆದರಲ್ಲ. ಈಗಾಗಲೇ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿಯವರು ಇಡಿ ಬಳಸಿಕೊಂಡು 240 ಶಾಸಕರನ್ನು ಪಕ್ಷಾಂತರ ಮಾಡಿದ್ದಾರೆ. ಜನಾಭಿಪ್ರಾಯದ ಮೇಲೆ ವಿಪಕ್ಷವನ್ನು ಮಣಿಸಲು ಬಿಜೆಪಿಗೆ ಮಣಿಸಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಇಡಿ. ಸಿಬಿಐ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಡಿ.ಸಿಬಿಐ ಬಿಜೆಪಿಯ ಡ್ರಾಮಾ ಕಂಪನಿ ಎಂದು ವಾಗ್ದಾಳಿ ನಡೆಸಿದ್ದಾರೆ.