ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣ ಸಂಬಂಧ ಅಕ್ಟೋಬರ್ ನಲ್ಲಿ ಎಲ್ಲ ಪ್ರಕರಣಗಳ ಚಾರ್ಜ್ ಶೀಟ್ ಆಗುತ್ತದೆ ಎಂದು ಬೆಂಗಳೂರು ಡಿಜಿ&ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಹಗರಣ ಸಂಬಂಧದ ಎಲ್ಲ ಪ್ರಕರಣಗಳು ಅಕ್ಟೋಬರ್ ನಲ್ಲಿ ಚಾರ್ಜ್ ಶೀಟ್ ಆಗುತ್ತದೆ. ಆ ನಂತರ ಮರು ಪರೀಕ್ಷೆ ದಿನಾಂಕ ಅನೌನ್ಸ್ ಮಾಡುತ್ತೇವೆ. ಪ್ರಕರಣ ದಾಖಲಾಗಿ 90 ದಿನಗಳಲ್ಲಿ ಚಾರ್ಜ್ ಶೀಟ್ ಆಗಬೇಕು ಆನಂತರ ಮರು ಪರೀಕ್ಷೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು.
ಪಿಎಸ್ ಐ ನೇಮಕಾತಿ ಪ್ರಕರಣ ಸಂಬಂಧ ಈಗಾಗಲೇ ಸಿಐಡಿ ಪೊಲೀಸರು 36 ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ಸಂಬಂಧ ಮಹತ್ವದ ಮಾಹಿತಿಗಳು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಬಳಿಕ ಪಿಎಸ್ ಐ ನೇಮಕಾತಿಗೆ ಮರು ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುತ್ತದೆ.