ಪುಣೆ : ಸರ್ಕಾರಿ ಸ್ವಾಮ್ಯದ ಐಷಾರಾಮಿ ಬಸ್ ಮತ್ತು ಕಂಟೈನರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಉರುಳಿ ದೇವಾಚಿ ಬಳಿಯ ಪುಣೆ ಸಾಸ್ವಾದ್ ರಸ್ತೆಯಲ್ಲಿ ನಡೆದಿದೆ.
ಮಧ್ಯರಾತ್ರಿ 12:30ಕ್ಕೆ ನಗರದಿಂದ 25 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಬಸ್ ಪಂಢರಪುರದಿಂದ ಪುಣೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ನಿಮ್ಮ ಕೈನಲ್ಲಿ ಹಣ ಉಳಿತಾಯ ಆಗಲ್ವಾ? ಈ ʻಕೆಟ್ಟ ಅಭ್ಯಾಸʼಗಳಿಗೆ ಬ್ರೇಕ್ ಹಾಕಿ, ಈ ಟಿಪ್ಸ್ ಫಾಲೋ ಮಾಡಿ | bad habits