ನವದೆಹಲಿ : ಮದ್ಯ ನೀತಿ ಪ್ರಕರಣದಲ್ಲಿ ಎಎಪಿ ಶಾಸಕ ದುರ್ಗೇಶ್ ಪಾಠಕ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿರುವ ಕುರಿತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ನ ಪಕ್ಷದ ಉಸ್ತುವಾರಿಯಾಗಿರುವ ದುರ್ಗೇಶ್ ಪಾಠಕ್ ಅವರು ದೆಹಲಿಯ ಅಬಕಾರಿ ನೀತಿಯ ರಚನೆಗೆ ಯಾವುದೇ ಸಂಬಂಧ ಹೊಂದಿಲ್ಲ. ರಾಜಕೀಯ ದ್ವೇಷದಿಂದಲೇ ಬಿಜೆಪಿ ಪಾಠಕ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.
ಇಂದು ಇಡಿ ಎಎಪಿಯ ಎಂಸಿಡಿ ದುರ್ಗೇಶ್ ಪಾಠಕ್ ಅವರ ಚುನಾವಣಾ ಉಸ್ತುವಾರಿಯನ್ನು ಕರೆದಿದೆ. ನಮ್ಮ ಎಂಸಿಡಿ ಚುನಾವಣಾ ಉಸ್ತುವಾರಿಗೂ ದೆಹಲಿ ಸರ್ಕಾರದ ಮದ್ಯ ನೀತಿಗೂ ಏನು ಸಂಬಂಧ? ಅವರ ಗುರಿ ಮದ್ಯ ನೀತಿಯೇ ಅಥವಾ ಎಂಸಿಡಿ ಚುನಾವಣೆಯೇ? ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
आज ED ने “आप” के MCD के चुनाव इंचार्ज दुर्गेश पाठक को समन किया है। दिल्ली सरकार की शराब नीति से हमारे MCD चुनाव इंचार्ज का क्या लेना देना? इनका टार्गेट शराब नीति है या MCD चुनाव?
— Manish Sisodia (@msisodia) September 19, 2022
ಎಎಪಿಯ ನಾಯಕ ದುರ್ಗೇಶ್ ಪಾಠಕ್ ಅವರು ದೆಹಲಿ ವಿಧಾನಸಭೆಯಲ್ಲಿ ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಭಾಟಿಯಾ ಅವರನ್ನು 11,000 ಮತಗಳ ಅಂತರದಿಂದ ಸೋಲಿಸಿದ್ದರು.