ತುಮಕೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್ಗೆ ಕುಣಿದು ಕುಪ್ಪಳಿಸುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷ (48) ಮೃತ ದುರ್ದೈವಿ. ಹೆಬ್ಬಾಕ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ನಿಮಜ್ಜನದ ಮೆರವಣಿಗೆ ವೇಳೆ ಶನಿವಾರ ಡಿಜೆ ಸೌಂಡ್ಸ್ ಹಾಕಲಾಗಿತ್ತು.
ಸೌಂಡ್ಗೆ ತಕ್ಕಂತೆ ಮೆರವಣಿಗೆಯಲ್ಲಿ ಜನ ಸಂಭ್ರಮ-ಸಡಗರದೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದರು. ವಿರೂಪಾಕ್ಷ ಕೂಡ ಕುಣಿಯುತ್ತಿದ್ದರು. ಈ ವೇಳೆ ಕುಸಿದು ಬಿದ್ದ ವಿರೂಪಾಕ್ಷರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ. ಡಿಜೆ ಸೌಂಡ್ಸ್ ಹೆಚ್ಚಿತ್ತು. ಪರಿಣಾಮ ಹೃದಯಾಘಾತವಾಗಿ ವಿರೂಪಾಕ್ಷ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.