ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಿವಾದಾತ್ಮಕ ಬೋಧಕ ಯತಿ ನರಸಿಂಹಾನಂದ ಸರಸ್ವತಿ ಅವರು ಗನ್ ಪೌಡರ್ ಬಳಸಿ ಮದರಸಾಗಳನ್ನು ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ ಹೇಳಿಕೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
BIGG NEWS : ಸಂಸದೆ ಸುಮಲತಾ ಹೇಳಿದ ದಿನ ನಾನು ಆಣೆ ಮಾಡಲು ರೆಡಿ : ಶಾಸಕ ಪುಟ್ಟರಾಜು ಸವಾಲು ಸ್ವೀಕಾರ
ಭಾನುವಾರ, ಯತಿ ನರಸಿಂಹಾನಂದ ಅವರು ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಉತ್ತರ ಪ್ರದೇಶ ಸರ್ಕಾರದಿಂದ ಮಾನ್ಯತೆ ಪಡೆಯದ ಮದರಸಾಗಳ ಕುರಿತು ನಡೆಯುತ್ತಿರುವ ಸಮೀಕ್ಷೆಯ ಕುರಿತು ಮಾತನಾಡಿದ ಯತಿ ನರಸಿಂಹಾನಂದ, ಮದರಸಾದಂತಹ ಸಂಸ್ಥೆ ಇರಬಾರದು. ಚೀನಾ ಮಾಡುವಂತೆ ಎಲ್ಲಾ ಮದರಸಾಗಳನ್ನು ಗನ್ಪೌಡರ್ನಿಂದ ಸ್ಫೋಟಿಸಬೇಕು. ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು. ಇದರಿಂದ ಅವರ ಮೆದುಳಿನಿಂದ ಕುರಾನ್ ಎಂಬ ವೈರಸ್ ಅನ್ನು ತೆಗೆದುಹಾಕಬೇಕು ಎಂದಿದ್ದಾರೆ.
ಮದರಸಾಗಳಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು (ಎಎಂಯು) ಸ್ಫೋಟಿಸಬೇಕು ಮತ್ತು ಅದರ ವಿದ್ಯಾರ್ಥಿಗಳನ್ನು ಬಂಧನ ಕೇಂದ್ರಗಳಿಗೆ ಕಳುಹಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ನೀಡಬೇಕು ಎಂದು ಯತಿ ನರಸಿಂಗಾನಂದ ಹೇಳಿದ್ದಾರೆ.
ಯತಿ ನರಸಿಂಹಾನಂದ ಅವರು ದ್ವೇಷಪೂರಿತ ಭಾಷಣದ ಆರೋಪಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಮಹಾತ್ಮಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಯತಿ ನರಸಿಂಹಾನಂದ್ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಯತಿ ನರಸಿಂಹಾನಂದರು ಒಂದು ಕೋಟಿ ಹಿಂದೂಗಳ ಹತ್ಯೆಗೆ ಮಹಾತ್ಮ ಗಾಂಧಿ ಕಾರಣ ಎಂದೇಳಿದ್ದಾರೆ ಎನ್ನಲಾಗುತ್ತಿದೆ.
BIG NEWS: ಹುಟ್ಟಿ 9 ವರ್ಷಗಳಾದ್ರೂ ಮಗಳಿಗೆ ಹೆಸರಿಡದ ಪೋಷಕರು: ತಮ್ಮ ನೆಚ್ಚಿನ ನಾಯಕ ʻಕೆಸಿಆರ್ʼನಿಂದಲೇ ನಾಮಕರಣ!