ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವಿರುದ್ಧ ಕಮಿಷನ್ ಆರೋಪಕ್ಕೆ ಸಂಬಂಧಿಸಿ ಕೊಲಾರದಲ್ಲಿ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದಾರೆ. 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ. ಕೆಂಪಯ್ಯ ಸೇರಿ 18 ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ. ಆದಷ್ಟು ಬೇಗ ಇತ್ಯರ್ಥ ಮಾಡಬೇಕೆಂದು ಮನವಿ ಮಾಡುತ್ತೇನೆ . 4 ತಿಂಗಳಲ್ಲಿ ಕೇಸ್ ಇತ್ಯರ್ಥ ಪಡಿಸುವಂತೆ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ತಿಂಗಳಲ್ಲಿ ಕೇಸ್ ಇತ್ಯರ್ಥ ಪಡಿಸುವಂತೆ ಅರ್ಜಿ ಸಲ್ಲಿಸುತ್ತೇನೆ . ನ್ಯಾಯಾಲಯಕ್ಕೆ ನಾನು ಮತ್ತೊಂದು ಅರ್ಜಿಯನ್ನು ಸಲ್ಲಿಸುತ್ತೇನೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ವಿರುದ್ಧ ಮುನಿರತ್ನ ಕಿಡಿಕಾರಿದ್ದಾರೆ. ವಿರೋಧಪಕ್ಷ ನಾಯಕರು ದಾಖಲೆಗಳನ್ನು ಬಿಡುಗಡೆ ಮಾಡಲಿ. ವಿಧಾನಸಭೆಯಲ್ಲಿ ಈ ಕುರಿತು ವರ್ವೆಯನ್ನು ಮಾಡಲಿ. 40 % ಕಮಿಷನ್ ಬಗ್ಗೆ ದಾಖಲೆ ನೀಡಿಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ನಾನು ತಪ್ಪು ಮಾಡಿದ್ರೆ ನನಗೆ ಶಿಕ್ಷೆಯಾಗಲೇಬೇಕು.ಅದಕ್ಕೆ ಸಾಕ್ಷಿ ಕೊಡಿ. ದಾಖಲೆ ಇಟ್ಟು ಮಾತಾಡಿದ್ರೆ ವಿಪಕ್ಷಗಖ ಘನತೆ ಹೆಚ್ಚಾಗುತ್ತದೆ ಎಂದು ಮುನಿರತ್ನ ಕೆಂಡಾಮಂಡಲರಾಗಿದ್ದಾರೆ.