ಚಂಡೀಗಢ: ಚಂಡೀಗಢ ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯಗಳನ್ನು ಚಿತ್ರೀಕರಿಸಿ ಹರಿಬಿಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿ ಸೇರಿ ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಪಂಜಾಬ್ನ ಮೊಹಾಲಿಯಾದ ಚಂಡೀಗಡದ ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿದ್ಯಾರ್ಥಿನಿಯೊಬ್ಬಳು ಹುಡುಗಿಯರ ಖಾಸಗಿ ವಿಡಿಯೋ ಮಾಡಿ ತನ್ನ ಗೆಳೆಯನಿಗೆ ಕಳುಹಿಸಿದ್ದಳು ಎಂದು ವದಂತಿ ಹರಡಿತ್ತು. ಆದ್ರೆ, ಆರೋಪಿ ಮಹಿಳಾ ವಿದ್ಯಾರ್ಥಿನಿ ಬೇರೆಯವರ ವಿಡಿಯೋ ಚಿತ್ರೀಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿ ತನ್ನದೇ ವಿಡಿಯೋವನ್ನು ಮಾಡಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಆಕೆಯ ಗೆಳೆಯ ಸನ್ನಿ ಮೆಹ್ತಾ (23) ಎಂಬಾತನಿಗೆ ಕಳುಹಿಸಿದ್ದಾಳೆ. ಇದೀಗ ಬಾಲಕಿಯನ್ನು ಬಂಧಿಸಲಾಗಿದೆ. ಇನ್ನೂ, ಗೆಳೆಯ ಸನ್ನಿ ಮೆಹ್ತಾನನ್ನು ಶಿಮ್ಲಾದಿಂದ ಬಂಧಿಸಲಾಗಿದೆ ಮತ್ತು ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಎರಡನೇ ವ್ಯಕ್ತಿಯನ್ನು ಶಿಮ್ಲಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Himachal Pradesh: One arrested, another detained in Chandigarh University case
Read @ANI Story | https://t.co/ZzRXmENly8#HimachalPradesh #Chandigarhincident #Chandigarh pic.twitter.com/LOKCnyQxQt
— ANI Digital (@ani_digital) September 18, 2022
ಪ್ರತಿಭಟನೆಯ ನಂತರ, ಪಂಜಾಬ್ ಪೊಲೀಸರು ವಿದ್ಯಾರ್ಥಿಗಳ ಆರೋಪಗಳನ್ನು ತನಿಖೆ ಮಾಡಲು ಹಿರಿಯ IPS ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಇನ್ನೂ, ಮುಖ್ಯಮಂತ್ರಿ ಭಗವಂತ್ ಮಾನ್ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಭರವಸೆ ನೀಡಿದ್ದರು.
ರಾಣಿ ಎಲಿಜಬೆತ್ II ಅಂತಿಮ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಂತಾಪ ಸೂಚಕ ಪುಸ್ತಕಕ್ಕೆ ಸಹಿ
BIGG NEWS : ಭೋವಿ ಸಮಾಜಕ್ಕೆ ಶೀಘ್ರ ಜಮೀನು ಮಂಜೂರು : ಸಿಎಂ ಬಸವರಾಜ ಬೊಮ್ಮಾಯಿ ಭರವಸೆ
BIGG NEWS : ಶೀಘ್ರವೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 15 ಸಾವಿರ ಹುದ್ದೆಗಳ ಭರ್ತಿ : ಸಿಎಂ ಬೊಮ್ಮಾಯಿ