ಡಬ್ಲಿನ್: ಐರ್ಲೆಂಡಿನ ವೈದ್ಯರು 55 ಎಎ ಮತ್ತು ಎಎಎ ಬ್ಯಾಟರಿಗಳನ್ನು ಮಹಿಳೆಯೊಬ್ಬಳ ಹೊಟ್ಟೆ ಮತ್ತು ಕರುಳಿನಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ಮಹಿಳೆ ಉದ್ದೇಶಪೂರ್ವಕವಾಗಿಯೇ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದು ತಿಳಿದುಬಂದಿದೆ.
ಸದ್ಯ 66 ವರ್ಷದ ಮಹಿಳೆಗೆ ಡಬ್ಲಿನ್ನ ಸೇಂಟ್ ವಿನ್ಸೆಂಟ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೊಟ್ಟೆ ನೋವಿನ ಸಲುವಾಗಿ ಚಿಕಿತ್ಸೆಗಾಗಿ ದಾಖಲು ಮಾಡಿದ ವೇಳೆಯಲ್ಲಿ, ಹೊಟ್ಟೆಯಲ್ಲಿ ಹಾಗೂ ಕರುಳಿನಲ್ಲಿ ಹಲವು ಬ್ಯಾಟರಿಗಳು ಇರುವುದನ್ನು ನೋಡಿ ಎಕ್ಸ್-ರೇ ಮೂಲಕ ಅವಳ ಹೊಟ್ಟೆಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ ಎಂದು ಐರಿಶ್ ಮೆಡಿಕಲ್ ಜರ್ನಲ್ನಲ್ಲಿ ಗುರುವಾರ ಪ್ರಕಟವಾದ ಪ್ರಕರಣ ವರದಿ ತಿಳಿಸಿದೆ. ಆರಂಭದಲ್ಲಿ, ರೋಗಿಯು ಸ್ವಾಭಾವಿಕವಾಗಿ ತನ್ನ ದೇಹದ ಮೂಲಕ ಬ್ಯಾಟರಿಗಳನ್ನು ರವಾನಿಸಲು ವೈದ್ಯರು ಕಾಯುತ್ತಿದ್ದರು, ಆದರೆ ಆಕೆ AA ಬ್ಯಾಟರಿಗಳನ್ನು ಮಾತ್ರವೇ ಹೊರಹಾಕಿದ್ದು, AAA ಬ್ಯಾಟರಿಗಳನ್ನು ಹೊರ ಹಾಕಲು ಸಾಧ್ಯವಾಗಿರಲಿಲ್ಲ ಹೀಗಾಗಿ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳನ್ನು ತೆಗೆದುಹಾಕುವುದು ಅಗತ್ಯವಾಯಿತು. ನಂತರ ಶಸ್ತ್ರಚಿಕಿತ್ಸಕರು ಅವಳ ಹೊಟ್ಟೆಯ ಮೂಲಕ ಒಂದು ಸಣ್ಣ ರಂಧ್ರವನ್ನು ಮಾಡಿ ಎಎ ಮತ್ತು ಎಎಎ ಎರಡನ್ನೂ ಒಳಗೊಂಡಂತೆ 46 ಬ್ಯಾಟರಿಗಳನ್ನು ತೆಗೆದುಹಾಕಿದರು ಎನ್ನಲಾಗಿದೆ.