ಕೆಎನ್್ಎನ್್ಡಿಜಿಟಲ್ ಡೆಸ್ಕ್ : ಭಾರತೀಯ ರೈಲ್ವೆಯು ವಿಂಟೇಜ್ ’13 ಕಮಾನು ಸೇತುವೆ’ಯಿಂದ ರೈಲು ಹಾದುಹೋಗುವುದನ್ನ ತೋರಿಸುವ ಮೋಡಿ ಮಾಡುವ ಡ್ರೋನ್ ವೀಡಿಯೊವನ್ನ ಹಂಚಿಕೊಂಡಿದೆ. 17 ಸೆಕೆಂಡುಗಳ ವೀಡಿಯೊ ಕ್ಲಿಪ್ ದಕ್ಷಿಣ ರೈಲ್ವೆಯ ಸೌಂದರ್ಯವನ್ನು ತೋರಿಸುತ್ತದೆ.
“ಭಾವಪರವಶ! ದಕ್ಷಿಣ ರೈಲ್ವೆಯ ಸೆಂಗೊಟ್ಟೈ-ಪುನಲೂರ್ ವಿಭಾಗದ ವಿಂಟೇಜ್ ’13 ಕಮಾನು ಸೇತುವೆ’ (ಪಥಿಮೂನು ಕಣ್ಣಾರ ಪಾಲಂ) ಮೇಲೆ ಚಲಿಸುವ ರೈಲಿನ ಆಕರ್ಷಕ ನೋಟ”, ಎಂದು ರೈಲ್ವೆ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್’ನಿಂದ ಭಾನುವಾರ ಟ್ವೀಟ್ ಮಾಡಿದೆ.
Ecstatic!
Captivating view of train traversing over the vintage ‘13 arch bridge’(Pathimoonu Kannara Palam) on Sengottai-Punalur section of Southern Railway. pic.twitter.com/mnFLVw175e
— Ministry of Railways (@RailMinIndia) September 18, 2022
ಕೆಲವೇ ಗಂಟೆಗಳಲ್ಲಿ, ಈ ತುಣುಕು 13 ಕೆ ವೀಕ್ಷಣೆಗಳನ್ನ ಗಳಿಸಿದ್ದು, ಈ ಕ್ಲಿಪ್ 1000ಕ್ಕೂ ಹೆಚ್ಚು ಲೈಕ್’ಗಳನ್ನ ಸಹ ಹೊಂದಿದೆ.
ಅಂದ್ಹಾಗೆ, ಭಾರತದ ಕೊಲ್ಲಂ-ಸೆಂಗೊಟ್ಟೈ ರೈಲು ಮಾರ್ಗದಲ್ಲಿರುವ ಪಥಿಮೂನ್ನು ಕನ್ನಾರಾ ಸೇತುವೆ (ಇದನ್ನು “13 ಕಮಾನು ಸೇತುವೆ” ಎಂದೂ ಕರೆಯಲಾಗುತ್ತದೆ) ಒಂದು ಐತಿಹಾಸಿಕ ಬ್ರಿಟಿಷ್ ಯುಗದ ರಚನೆಯಾಗಿದೆ. ಈ ಸೇತುವೆಯು ಕೇರಳದ ಕೊಲ್ಲಂ ಜಿಲ್ಲೆಯ ಕಜುತುರುಟ್ಟಿಯಲ್ಲಿದೆ. ಇದು ಭಾರತದ ಅತ್ಯಂತ ಹಳೆಯ ಪರ್ವತ ರೈಲು ಮಾರ್ಗಗಳಲ್ಲಿ ಒಂದರ ಒಂದು ಭಾಗವಾಗಿದೆ.