ಮೈಸೂರು: ಇಂದು ಮೈಸೂರಿನಲ್ಲಿ ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಿನ ಭರದಲ್ಲಿ, ಈ ಸರ್ಕಾರವನ್ನು ಕಿತ್ತು ಎಸೆಯುವ ಸಲುವಾಗಿ, ದೇಶದಲ್ಲಿ ಸರ್ಕಾರವನ್ನು ಕಿತ್ತು ಎಸೆಯುವ ಸಲುವಾಗಿ ನರೇಂದ್ರ ಮೋದಿಯವರು ನಿಮ್ಮೆಲ್ಲ ಒಗ್ಗಟ್ಟಾಗಿ ಅಂತ ಪಾದಾಯಾತ್ರೆ ಮಾಡುತ್ತಿದ್ದಾರೆ ಅಂತ ಹೇಳಿದರು.
ಇದೇ ವೇಳೆ ಅವರು ಇವರು ಯಾವೆಲ್ಲ ಕಾರಣಕ್ಕೆ ಪಾದಯಾತ್ರೆಯನ್ನು ನಡೆಸಲಾಗಿದೆ ಅಂತ ನಿಮಗೆಲ್ಲ ತಿಳಿದಿದೆ ಅಂತ ಹೇಳಿದ ಅವರು, ದೇಶಕ್ಕೆ ಸ್ವಾಂತ್ರತ್ಯ ಬಂದು 75 ವರ್ಷವಾಗಿದ್ದು, ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಇಲ್ಲ, ಈ ವರ್ಗದ ಜನ ಆತಂಕಕ್ಕೆ ಒಳಗಾಗಿದ್ದಾರೆ, ಧರ್ಮ ರಾಜಕಾರಣದಲ್ಲಿ ದೇಶವನ್ನು ಚೂರು ಮಾಡುವ ಕೆಲಸವನ್ನು ನರೇಂದ್ರ ಮೋದಿಯವರುಮಾಡುತ್ತಿದ್ದಾರೆ. ಈ ದೇಶದಲ್ಲಿ ಅನೇಕ, ಜಾತಿ, ಧರ್ಮ, ಅನೇಕ ಸಂಸ್ಕ್ರತಿ ಇದ್ದು, ಇಲ್ಲಿ ವೈವಿದ್ಯತೆಯನ್ನು ಕಾಣಬಹುದಾಗಿದ್ದು, ಇದು ಬಹುತ್ವದಿಂದ ಕೂಡಿದ ದೇಶವಾಗಿದೆ ಅಂತ ಹೇಳಿದರು. ನಾವೆಲ್ಲರು ಮನುಶ್ಯರು, ನಾವೆಲ್ಲ ಮನುಶ್ಯತ್ವದಲ್ಲಿ ಬದುಕ ಬೇಕು, ನಮ್ಮಲ್ಲಿ ಯಾವುದೇ ಧರ್ಮದಲ್ಲಿ ಬದುಕುವ ಸ್ವಾತಂತ್ಯವಿದೆ ಅಂತ ಹೇಳಿದರು. ಆಯಾ ಧರ್ಮದವರು ಆಯಾಧರ್ಮದ ಆಚರಣೆ ಮಾಡುವ ಸ್ವಾತಂತ್ಯವಿದೆ ಅಂತ ಹೇಳಿದರು. ಬಾಬಾ ಸಾಹೇಬ ಅಂಬೇಡ್ಕರ್ ನೀಡುವ ಸಂವಿಧಾನದಲ್ಲಿ, ನಾವೆಲ್ಲರು ಮನುಶ್ಯರಾಗಿ ಇರಬೇಕು, ಇದನ್ನೇ ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕ ಅಂತ ಆಶಯ ಪಟ್ಟಿದ್ರು ಅಂತ ತಿಳಿಸಿದರು.