ನವದೆಹಲಿ : ವಿರಾಟ್ ಕೊಹ್ಲಿ ವಿಶೇಷವಾಗಿ ಕೇಶ ವಿನ್ಯಾಸ ಪ್ರಯೋಗಗಳನ್ನ ಇಷ್ಟಪಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ವಿಭಿನ್ನ ಕೇಶ ವಿನ್ಯಾಸಗಳನ್ನ ಪ್ರಯತ್ನಿಸಲು ಎಂದಿಗೂ ಹಿಂಜರಿಯದ ಕ್ರಿಕೆಟಿಗರಲ್ಲಿ ಕೊಹ್ಲಿ ಕೂಡ ಒಬ್ಬರು.
ಸಧ್ಯ ಕೊಹ್ಲಿಯ ಹೊಸ ನೋಟದ ಹಲವಾರು ಚಿತ್ರಗಳು ಆನ್ ಲೈನ್’ನಲ್ಲಿ ಕಾಣಿಸಿಕೊಂಡಿವೆ. ಮೂಲತಃ, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ರಶೀದ್ ಸಲ್ಮಾನ್ನಿ ಅವರು ಈ ಚಿತ್ರಗಳನ್ನ ಹಂಚಿಕೊಂಡಿದ್ದು, ಅವರು ಕೊಹ್ಲಿಗೆ ಹೊಸ ರೂಪವನ್ನ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
“ಸ್ವತಃ ರಾಜನೊಂದಿಗೆ” ಎಂದು ರಶೀದ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
https://www.instagram.com/rashidtheartist/?utm_source=ig_embed&ig_rid=65d5e5b9-68c6-4e44-8943-f8f371ffc7a2
ಪೋಸ್ಟ್ನಲ್ಲಿ, ವಿರಾಟ್ ತನ್ನ ಅಂಡರ್ ಕಟ್ ಪ್ರದರ್ಶಿಸುವುದನ್ನ ಕಾಣಬಹುದು.
ಈ ಪೋಸ್ಟ್’ಗೆ ಪ್ರತಿಕ್ರಿಯಿಸಿರುವ ಗಾಯಕ ಹಾರ್ಡಿ ಸಂಧು, “ಚಾ ಗಯೇ ಗುರು” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು “ಅವರು ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ” ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಅಂದ್ಹಾಗೆ, ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ಐಸಿಸಿ ಟಿ 20 ವಿಶ್ವಕಪ್ ಆರಂಭವಾಗಲಿದ್ದು, ಅಕ್ಟೋಬರ್ 23 ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ.