ಕೋಲಾರ : “ಇಡಿ ದಾಳಿ ವೈಯಕ್ತಿಕ ದ್ವೇಷ, ಷಡ್ಯಂತ್ರ ಅನ್ನುವ ಹಾಗಿದ್ದರೆ, ಇಷ್ಟೋತ್ತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಜೈಲಿನಲ್ಲಿರಬೇಕಿತ್ತು” ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್’ಗೆ ಇಡಿ ಬುಲಾವ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, “ಇಡಿ ದಾಳಿ ವೈಯಕ್ತಿಕ ದ್ವೇಷ, ಷಡ್ಯಂತ್ರ ಅನ್ನುವ ಹಾಗಿದ್ದರೆ, ಇಷ್ಟೋತ್ತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಜೈಲಿನಲ್ಲಿರಬೇಕಿತ್ತು. ಕಾನೂನಿನಲ್ಲಿ ಏನೇನು ಅವಕಾಶವಿದೆಯೋ ಅದು ಆಗುತ್ತದೆ. ಡಿಕೆಶಿ ಇಡಿ ನೋಡಿಸ್ ನೀಡಿದ್ದಲ್ಲಿ ಯಾವುದೇ ಷಡ್ಯಂತ್ರವಿವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಏಕೆ ಇಡಿ ದಾಳಿ ಮಾಡಿಲ್ಲ” ಎಂದು ಪ್ರಶ್ನಿಸಿದರು.