ಕಲಬುರಗಿ: ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ನಾವು ಈಗಾಗಲೇ ಸಾಲ ಮಾಡಿ ತಪ್ಪು ತಿನ್ನುತ್ತಿದ್ದೇವೆ ಎಂದು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿಎಂ ಐದು ಸಾವಿರ ಕೋಟಿ ಕೊಡುತ್ತೇನೆ ಅಂತಾ ಹೇಳಿದ್ದೆ ತಡ. ಬಿಜೆಪಿ ಶಾಸಕರಿಗೆ ಜೊಲ್ಲು ಸುರಿಯಲು ಆರಂಭವಾಗಿದೆ. ೪೦ % ಕಮಿಷನ್ ಹೊಡೆಯಬಹುದೆಂದು ಜೊಲ್ಲು ಸುರಿಸಲು ಆರಂಭ ಮಾಡಿದ್ದಾರೆ. ಯಾರೋ ಕೊಟ್ಟ ಉದ್ರಿ ಭಾಷಣ ಮಾಡಿ ಸಿಎಂ ಹೋಗಿದ್ದಾರೆ. ನಿನ್ನೆ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಷಣ ಮಾಡಿ ಹೋಗಿದ್ದಾರೆ ಎಂದು ಬಿಜೆಪಿ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.