ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿತ್ತು. ಆದರೆ ಇದೀಗ ಮತ್ತೆ ಸೋಮವಾರದಿಂದ ಜೆಸಿಬಿ ಘರ್ಜನೆಗೆ ಬಿಬಿಎಂಪಿ ಮುಹೂರ್ತ ಫಿಕ್ಸ್ ಮಾಡಿದೆ. ಅದರೆ ಮಾರ್ಕಿಂಗ್ ಮಾಡಿರುವ ಜಾಗದಲ್ಲಿ ಕಿಡಿಗೇಡಿಗಳು ಪೇಂಟಿಂಗ್ ಮಾಡಿದ್ದು, ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ.
ರಾಜಕಾಲುವೆ ಒತ್ತುವರಿದಾರರ ವಿರುದ್ಧ ಬಿಬಿಎಂಪಿ ಸಮರ ಸಾರಿ ಒತ್ತುವರಿ ತೆರವು ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿತ್ತು. ಮಹದೇವಪುರದಲ್ಲಿ 15 ಕಡೆ ಮಾರ್ಕಿಂಗ್ ಮಾಡಿ 8 ವಲಯದಲ್ಲೂ ಆರಂಭದಲ್ಲಿ ಒತ್ತುವರಿ ತೆರವುಗೊಳಿಸಲು ಆಗಲಿಲ್ಲ. ಹೀಗಾಗಿ
ಬಿಬಿಎಂಪಿ ಈ ನಡೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಯಿತು. ಬಡವರ ಮನೆ ಹೊಡೆದು ಶ್ರೀಮಂತರ ಮನೆ ಹೊಡೆಯದೇ ಇರೋದಕ್ಕೆ ವಿರೋಧ ವ್ಯಕ್ತವಾದ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ನಾಳೆಯಿಂದ ಬೆಂಗಳೂರಿನ 8 ವಲಯದಲ್ಲೂ ತೆರವು ಕಾರ್ಯಾಚರಣೆ ಆರಂಭ ಮಾಡುವುದಾಗಿ ಯೋಜನೆ ಮಾಡಲಾಗಿದೆಯಂತೆ.