ಆಗ್ರಾ (ಯುಪಿ): ಆಗ್ರಾದ ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತರಾದ ಮೆಕ್ಸಿಕನ್ ಜೋಡಿಯೊಂದು ಆಗ್ರಾದ ಶಿವ ದೇವಾಲಯದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದೆ.
ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ಕ್ಲೌಡಿಯಾ ಮತ್ತು ಸೆರಾಮಿಕೊ ಏಳು ಬಾರಿ ಪ್ರದಕ್ಷಿಣೆ ಹಾಕಿದ್ದಾರೆ.
“ನಾವು ಷಹಜಹಾನ್ ಮತ್ತು ಮುಮ್ತಾಜ್ ಅವರ ಪ್ರೇಮಕಥೆಯಿಂದ ಪ್ರಭಾವಿತರಾಗಿದ್ದೇವೆ. ನಮ್ಮ ಪ್ರೀತಿಯನ್ನು ಶಾಶ್ವತವಾಗಿ ಮತ್ತು ಸ್ಮರಣೀಯವಾಗಿ ಇರಿಸಲು ಬಯಸಿದ್ದೇವೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಭಾರತಕ್ಕೆ ಭೇಟಿ ನೀಡಿ ಅಲ್ಲೇ ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೆವು. ಈಗ ಆಕನಸು ನನಸಾಗಿದೆ” ಎಂದು ಕ್ಲೌಡಿಯಾ ಹೇಳಿದರು.
ವಿದೇಶಿ ಜೋಡಿಯ ವಿವಾಹ ಸಮಾರಂಭವನ್ನು ಏರ್ಪಡಿಸುವ ಜವಾಬ್ದಾರಿಯನ್ನು ಸ್ಥಳೀಯ ಹೋಟೆಲ್ ಉದ್ಯಮಿ ಗೌರವ್ ಗುಪ್ತಾ ವಹಿಸಿಕೊಂಡಿದ್ದರು.
BIGG NEWS: ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ; ಸಚಿವ ಕೋಟ ಶ್ರೀನಿವಾಸ ಪೂಜಾರಿ
BIGG NEWS : ಮೈಸೂರು ಜಿಲ್ಲೆಯಲ್ಲಿ ದಸರಾ ರಜೆ ಘೋಷಣೆ : ಸೆ. 26 ರಿಂದ ಅ.09 ರ ತನಕ ಶಾಲೆಗಳಿಗೆ ರಜೆ