ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಧುನಿಕತೆ ಒಗ್ಗಿರುವ ಜನರು ಆಗಾಗ ಕೆಲವೊಂದು ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಿರುತ್ತಾರೆ. ಒಂದೋ ವ್ಯಕ್ತಿಯಿಂದ ಅಥವಾ ಮಿಷಿನ್ಗಳಿಂದ ಆದ ಯಡವಟ್ಟುಗಳಿಂದಾಗಿ ಒಮ್ಮೊಮ್ಮೆ ಹಣ ಕಳೆದುಕೊಳ್ಳುವುದು ಉಂಟು, ಹಣವನ್ನು ಪಡೆಯುವುದು ಉಂಟು. ಅಂರಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ.
ದೈತ್ಯ ಕಂಪನಿ ಗೂಗಲ್ ಹ್ಯಾಕರ್ ಅಕೌಂಡ್ಗೆ ಆಕಸ್ಮಿಕವಾಗಿ ಸಾವಿರ ಅಲ್ಲ ಲಕ್ಷವಲ್ಲ ಬರೋಬ್ಬರಿ 2 ಕೋಟಿ ರೂ.ಗಳನ್ನು ಹಾಕಿದೆ. ಇದು ಸ್ವತಃ ಕಾಸು ತೆಗೆದುಕೊಂಡವನಿಗೆ ಗೊತ್ತಿಲ್ಲ. ಇಷ್ಟೊಂದು ಹಣ ಖಾತೆಗೆ ಜಮೆ ಆಗಿರುವ ವಿಚಾರ 3 ವಾರಗಳ ಬಳಿಕ ವ್ಯಕ್ತಿಗೆ ತಿಳಿದು ಬಂದಿದೆ.
Mysore Dasara 2022: ಹೀಗಿದೆ ‘ವಿಶ್ವವಿಖ್ಯಾತ ಮೈಸೂರು ದಸರಾ 2022’ರ ಕಾರ್ಯಕ್ರಮಗಳ ಪಟ್ಟಿ
ಗೂಗಲ್ ಮತ್ತು ಹ್ಯಾಕರ್ ಮಧ್ಯ ಯಾವುದೇ ರೀತಿ ವಹಿವಾಟು ನಡೆದಿರಲಿಲ್ಲ. ಆದರೂ, ಗೂಗಲ್ ಖಾತೆಯಿಂದ ಬರೋಬ್ಬರಿ (2.5 ಲಕ್ಷ ಡಾಲರ್) 2 ಕೋಟಿ ರೂಪಾಯಿ ಅನ್ನು ಸ್ಯಾಮ್ ಕರಿ ಎಂಬುವವರ ಖಾತೆಗೆ ಜಮಾ ಮಾಡಿದೆ. ಈ ವಹಿವಾಟಿನ ಬಗ್ಗೆ ಸ್ಯಾಮ್ ಕರಿಗೆ ಸಂದೇಶವೂ ಹೋಗಿದೆ. ಅದಾಗ್ಯೂ, ಯಾವ ಕಾರಣಕ್ಕೆ ಈ ಹಣವು ಕರಿ ಖಾತೆಗೆ ಜಮಾ ಆಯಿತು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಗೂಗಲ್ ಖಾತೆಯಿಂದ ತಮ್ಮ ಖಾತೆಗೆ 2 ಕೋಟಿ ಹಣ ಬಂದಿರುವ ಬಗ್ಗೆ ಸ್ವತಃ ವ್ಯಕ್ತಿಗೆ ತಿಳಿದಿರಲಿಲ್ಲ.ಅಕೌಂಟ್ಗೆ ಹಣ ಬಂದಿದ್ದರೂ ಯಾವುದೇ ಸಂದೇಶ ಬಂದಿರಲಿಲ್ಲ. ಘಟನೆಯಾದ ಮೂರು ವಾರಗಳ ಬಳಿಕ ಹಣ ತಮ್ಮ ಖಾತೆಗೆ ಹಣ ಬಂದಿರುವುದು ಗೊತ್ತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅವರು, ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಆಕಸ್ಮಿಕವಾಗಿ ಗೂಗಲ್ ನನಗೆ $249,999 ಅನ್ನು ಕಳುಹಿಸಿ 3 ವಾರಗಳಿಗಿಂತ ಹೆಚ್ಚು ಸಮಯವಾಗಿದೆ. ನಾವು ಗೂಗಲ್ ಅನ್ನು ಸಂಪರ್ಕಿಸಲು ಯಾವುದೇ ಮಾರ್ಗವಿದೆಯೇ ಎಂದು ಕರಿ ಟ್ವೀಟ್ ಮಾಡಿದ್ದಾರೆ. ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ವಹಿವಾಟಿನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ನ್ಯೂಸ್ವೀಕ್ನ ಪ್ರಕಾರ, ಕರಿಯು ನೆಬ್ರಸ್ಕಾದ ಒಮಾಹಾದಲ್ಲಿರುವ ಯುಗಾ ಲ್ಯಾಬ್ಸ್ನ ಸಿಬ್ಬಂದಿ ಭದ್ರತಾ ಇಂಜಿನಿಯರ್ ಆಗಿದ್ದಾರೆ. ಹಲವು ಕಂಪನಿಗಳು ತಮ್ಮ ಸಾಫ್ಟ್ವೇರ್ನಲ್ಲಿ ದೋಷ ಅಥವಾ ಭದ್ರತಾ ಅಂತರವನ್ನು ಕಂಡುಕೊಂಡ ವ್ಯಕ್ತಿಗಳಿಗೆ ವಿತ್ತೀಯ ಬಹುಮಾನಗಳನ್ನು ನೀಡುತ್ತವೆ ಎಂದಿದೆ
ತಮ್ಮ ಸಿಬ್ಬಂದಿಯೊಬ್ಬರು ಮಾಡಿದ ತಪ್ಪಿನಿಂದಾಗಿ ಆಕಸ್ಮಿಕವಾಗಿ ಕರಿ ಖಾತೆಗೆ 2 ಕೋಟಿ ರೂಪಾಯಿ ಪಾವತಿ ಮಾಡಿರುವುದಾಗಿ ಎನ್ಪಿಆರ್ಗೆ ಗೂಗಲ್ ದೃಢಪಡಿಸಿದ್ದು, ಸೀಕ್ರೆಟ್ ಹಿಂದಿನ ಅಸಲಿ ಕಥೆ ಬಹಿರಂಗಗೊಂಡಿದೆ. “ನಮ್ಮ ತಂಡವು ಇತ್ತೀಚೆಗೆ ಮಾನವ ದೋಷದ ಪರಿಣಾಮವಾಗಿ ತಪ್ಪಾದ ವ್ಯಕ್ತಿಗೆ ಹಣ ಪಾವತಿ ಮಾಡಿದೆ. ಪ್ರಭಾವಿತ ಪಾಲುದಾರರು ಈ ಬಗ್ಗೆ ತ್ವರಿತವಾಗಿ ನಮಗೆ ತಿಳಿಸಿದ್ದರ ಬಗ್ಗೆ ನಾವು ಪ್ರಶಂಸಿಸುತ್ತೇವೆ. ಅದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಗೂಗಲ್ ವಕ್ತಾರರು ಎನ್ಪಿಆರ್ಗೆ ತಿಳಿಸಿದ್ದಾರೆ.