ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಗೆ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮನೆ ಹಾನಿ ಸಮೀಕ್ಷೆಗೆ ಇಂಚಿನಿಯರಗಳ ಕೊರತೆ ಇದ್ದಲ್ಲಿ ಬೇರೆ ಬೇರೆ ಇಲಾಖೆಗಳ ಇಂಜಿನೀಯರ್ಗಳನ್ನು ನಿಯೋಜಿಸಿಕೊಂಡು ತಕ್ಷಣ ಪರಿಹಾರ ವಿತರಿಸುವ ಕಾರ್ಯವಾಗಬೇಕು. ನಿರಂತರ ಮಳೆ ಮತ್ತು ಪ್ರವಾಹ ಸನ್ನಿವೇಶ ನೋಡಿಕೊಂಡು ಜನ ಸಂಬಂಧಿಕರ ಮನೆಗೆ ಹೋಗಿರುವ ಸಂಬಂವನೀಯತೆ ಇರುತ್ತದೆ, ಇದನ್ನೇ ಮನೆಯಲ್ಲಿ ಯಾರು ವಾಸವಿಲ್ಲ ಅಂತ ತಿಳಿದು ಆ ಮನೆ ಸಮೀಕ್ಷೆಯಿಂದ ಕೈಬಿಡಬಾರದು. ಬಡವರ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮಳೆಗೆ ಹಾನಿಯಾಗಿದ್ದು, ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕೆಂದರು.
BREAKING NEWS: ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ FIR ದಾಖಲು
ಬದಾಮಿ ತಾಲೂಕಿಗೆ ಸಂಬಂದಿಸಿದಂತೆ 2 ಕೋಟಿಗಿಂತ ಹೆಚ್ಚಿನ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಎ ಮತ್ತು ಬಿ-1, ಬಿ-2 ವರ್ಗದ ಮನೆಗಳಿಗೆ ಮೊದಲನೆ ಹಂತದ ಅನುದಾನವನ್ನು ತಕ್ಷಣ ವಿತರಿಸಬೇಕು, ಸಿ ಕೆಟಗೇರಿಯಲ್ಲಿರುವ ಮನೆಗಳಿಗೆ ಒಂದೇ ಬಾರಿಗೆ 50 ಸಾವಿರದಂತೆ ಬಿಡುಗಡೆ ಮಾಡತಕ್ಕದ್ದು, ಅದೇ ರೀತಿ ಇತರೆ ತಾಲೂಕುಗಳಲ್ಲಿ ಆಗಿರುವ ಮನೆ ಹಾನಿಗೆ ಎರಡಿ ದನಗಳಲ್ಲಿ ಪರಿಹಾರ ವಿತರಣೆಯಾಗಬೇಕು. ಇದರ ಜೊತೆಗೆ ಬೆಳೆ ಹಾನಿ ಸಮೀಕ್ಷೆ ಮಾಡುವುದು ಕೂಡ ಅಷ್ಟೇ ಅವಶ್ಯವಿದ್ದು, ಭೂಮಿಯಲ್ಲಿ ನೀರಿನ ತೆವಾಂಶ ಕಡಿಮೆಯಾದ ತಕ್ಷಣ ಕೃಷಿ ಅಧಿಕಾರಿಗಳು ಮುಂದಿನ 10-12 ದಿನಗಳಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವ ಕೆಲಸವಾಗಬೇಕು ಎಂದರು.
BREAKING NEWS: SC/ST ಮಕ್ಕಳಿಗೆ ವೇದ ಗಣಿತ, ಸುತ್ತೋಲೆ ವಾಪಸ್ಸು | Vedic Maths withdrawn
ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ ಸಭೆಗೆ ಮಾಹಿತಿ ನೀಡಿ ಪ್ರಾಥಮಿಕ ವರದಿ ಪ್ರಕಾರ ಸೆ.1 ರಿಂದ 16 ರವರೆಗೆ ಜಿಲ್ಲೆಯಲ್ಲಿ ಎ ಕೆಟಗೇರಿಯ 489 ಮನೆ ಹಾಗೂ ಬಿ ಮತ್ತು ಸಿ ಕೆಟಗೇರಿಯ 860 ಮನೆಗಳು ಅತಿವೃಷ್ಠಿಯಿಂದ ಹಾನಿಗೊಳಗಾಗಿವೆ. 326 ಹಳ್ಳಿಗಳ 18929 ಹೇಕ್ಟೇರ್ ಪ್ರದೇಶ ಕೃಷಿ ಮತ್ತು 3823 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಬೆಳೆಗಳು ನಾಶವಾಗಿವೆ. 223 ಮನೆಗಳಿಗೆ ನೀರು ನುಗ್ಗಿದ್ದು, 22 ಲಕ್ಷ ಪರಿಹಾರ ಬಿಡುಗಡೆಯಾಗಿರುತ್ತದೆ. 4 ಜೀವ ಹಾನಿಯಾಗಿದ್ದು, ಈಗಾಗಲೇ ಪರಿಹಾರ ಧನ ವಿತರಿಸಲಾಗಿದೆ ಎಂದರು. ಸಭೆಗೆ ಮುನ್ನ ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾದ ಹಾನಿ ಕುರಿತಾದ ವಿಡಿಯೋ ಚಿತ್ರವನ್ನು ಸಚಿವರು ವೀಕ್ಷಿಸಿದರು.
ಹಾಸನಾಂಭೆ ದರ್ಶನೋತ್ಸವ ಸಂಪ್ರದಾಯ ಹಾಗೂ ಸಡಗರಕ್ಕೆ ಕೊರತೆಯಿಲ್ಲದಂತೆ ಆಚರಣೆಗೆ ಸಚಿವ ಕೆ.ಗೋಪಾಲಯ್ಯ ಸೂಚನೆ
ಸಭೆಯಲ್ಲಿ ಶಾಸಕ ವಿರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.