ನವದೆಹಲಿ : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಟಿಬಿ ನಿರ್ಮೂಲನಾ ಕಾರ್ಯಕ್ರಮದ ಭಾಗವಾಗಿ ಒಡಿಶಾದ ನಾಲ್ಕು ಜಿಲ್ಲೆಗಳಲ್ಲಿನ ಎಲ್ಲಾ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದಾರೆ. ಟಿಬಿ ಮುಕ್ತ ಭಾರತ ಅಭಿಯಾನದ ಪ್ರಧಾನಮಂತ್ರಿಯವರ ದೃಷ್ಟಿಯ ಭಾಗವಾಗಿ, ಕೇಂದ್ರ ಸಚಿವರು 72 ಫಲಾನುಭವಿಗಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಬೆಂಬಲವನ್ನು ಕಳುಹಿಸುತ್ತಿದ್ದಾರೆ.
2025 ರ ವೇಳೆಗೆ ಟಿಬಿ ಮುಕ್ತ ಭಾರತದ ಗುರಿಯನ್ನು ಸಾಧಿಸಲು ಮತ್ತು ಪ್ರಧಾನಿ ಮೋರಿಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ಒಡಿಶಾದ ಜಿಲ್ಲೆಗಳಲ್ಲಿನ ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದಾರೆ. ಒಡಿಶಾದ ಅಂಗುಲ್, ದಿಯೋಗರ್, ಧೆಂಕನಲ್ ಮತ್ತು ಸಂಬಲ್ಪುರ್ ಜಿಲ್ಲೆಗಳಿಂದ ಎಲ್ಲಾ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Guided by the spirit of Sewa and Jan-bhagidari, I have adopted all TB patients in the four districts of Angul, Deogarh, Dhenkanal and Sambalpur as a part of the #TBMuktBharat initiative to help realise PM @narendramodi’s goal of a TB-free India by 2025 and also mark his birthday.
— Dharmendra Pradhan (@dpradhanbjp) September 17, 2022
ಪ್ರಧಾನಮಂತ್ರಿಯವರ ಕ್ಷಯರೋಗ ಗುರಿಯನ್ನು ಸಾಕಾರಗೊಳಿಸಲು ಸಹಾಯ ಮಾಡುವ ಟಿಬಿ ಮುಕ್ತ ಭಾರತ ಉಪಕ್ರಮದ ಭಾಗವಾಗಿ ನಾನು ಅಂಗುಲ್, ದಿಯೋಗರ್, ಧೆಂಕನಲ್ ಮತ್ತು ಸಂಬಲ್ಪುರದ ನಾಲ್ಕು ಜಿಲ್ಲೆಗಳಲ್ಲಿ ಎಲ್ಲಾ ಟಿಬಿ ರೋಗಿಗಳನ್ನು ದತ್ತು ತೆಗೆದುಕೊಂಡಿದ್ದೇನೆ. 2025 ರ ವೇಳೆಗೆ ಭಾರತವನ್ನು ಮುಕ್ತಗೊಳಿಸಿ ಮತ್ತು ಮೋದಿ ಜಿ ಅವರ ಜನ್ಮದಿನದ ಪ್ರಯುಕ್ತ ಈ ಕಾರ್ಯ ಮಾಡಿರುವುದುದಾಗಿ ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.
ಒಡಿಶಾದ ಈ ನಾಲ್ಕು ಜಿಲ್ಲೆಗಳಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನಿ-ಕ್ಷಯ ಮಿತ್ರನಾಗಿ ನನ್ನ ಬೇಷರತ್ ಬೆಂಬಲವನ್ನು ನಾನು ಪ್ರತಿಜ್ಞೆ ಮಾಡುತ್ತೇನೆ. ಮೊದಲಿಗೆ, ಟಿಬಿ ವಿರುದ್ಧದ ಹೋರಾಟವನ್ನು ಬಲಪಡಿಸಲು ನಾನು 72 ಫಲಾನುಭವಿಗಳಿಗೆ ಹೆಚ್ಚುವರಿ ಪೌಷ್ಟಿಕಾಂಶದ ಬೆಂಬಲವನ್ನು ಕಳುಹಿಸುತ್ತಿದ್ದೇನೆ.
Mysuru Dasara 2022: ಮತ್ತೆ ವಿವಾದ ಹುಟ್ಟಿ ಹಾಕಿದ ರಾಜ್ಯ ಸರ್ಕಾರದ ನಡೆ
ಟಿಬಿ (ಕ್ಷಯರೋಗ) ಮುಕ್ತ ಭಾರತ್ ಅಭಿಯಾನದ ಪ್ರಧಾನ ಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಭಾರತೀಯ ಕೈಗಾರಿಕಾ ಒಕ್ಕೂಟ (CII) ಪೌಷ್ಠಿಕಾಂಶದ ಬೆಂಬಲವನ್ನು ನೀಡುವ ಮೂಲಕ 35,000 ಕ್ಕೂ ಹೆಚ್ಚು ಕ್ಷಯರೋಗ (ಟಿಬಿ) ರೋಗಿಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ.